National Political News: ಪ್ರಿಯಾಂಕಾ ವಾದ್ರಾ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕಾರಣಕ್ಕೆ ಭಾರತ್ ಜೋಡೋ ನ್ಯಾಯಯಾತ್ರೆಗೆ ಪ್ರಿಯಾಂಕಾ ಹೋಗಲಾಗುತ್ತಿಲ್ಲ. ಹಾಗಾಗಿ ಅವರು ಸಹೋದರ ರಾಹುಲ್ ಗಾಂಧಿಯವರಿಗೆ ನ್ಯಾಯ ಯಾತ್ರೆಗಾಗಿ ವಿಶ್ ಹೇಳಿದ್ದಾರೆ.
ಕಳೆದ ಸಲ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಪ್ರಿಯಾಂಕಾ ಕೂಡ ಭಾಗವಹಿಸಿದ್ದರು. ಆದರೆ ಈ ಬಾರಿ ಪ್ರಿಯಾಂಕಾ ಅನಾರೋಗ್ಯ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸುದಾರಿಸಿದ ಬಳಿಕ ಪ್ರಿಯಾಂಕಾ ಮತ್ತೆ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸೇರಲಿದ್ದಾರೆ.
ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆ ಬರುವುದನ್ನೇ ಕಾಯುತ್ತಿದ್ದು. ಈ ಸ್ಥಳದಲ್ಲಿ ಸಹೋದರನೊಂದಿಗೆ ಪ್ರಚಾರ ನಡೆಸಬೇಕು ಎಂದುಕೊಂಡಿದ್ದರು. ಬಿಹಾರದಿಂದ ಉತ್ತರಪ್ರದೇಶದ ಚಂದೌಲಿಯಲ್ಲಿ ಪ್ರಿಯಾಂಕಾ ಯಾತ್ರೆಗೆ ಸೇರಲಿದ್ದರು. ಆದರೆ ಉತ್ತರಪ್ರದೇಶಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆ ಬಂದಿದ್ದು, ಇದೇ ವೇಳೆ ಪ್ರಿಯಾಂಕಾ ಈ ಯಾತ್ರೆಯಲ್ಲಿ ಭಾಗವಹಿಸಲಾಗುತ್ತಿಲ್ಲ.
ಹಾಗಾಗಿ ರಾಹುಲ್ ಗಾಂಧಿ ಸೇರಿ ಇತರ ನಾಯಕರಿಗೆ ಶುಭಾಶಯ ಕಳಿಸಿರುವ ಪ್ರಿಯಾಂಕಾ, ನ್ಯಾಯ ಯಾತ್ರೆ ಯಾವುದೇ ಅಡಚಣೆ ಇಲ್ಲದೇ ಸಾಗಲಿ ಎಂದು ಹಾರೈಸಿದ್ದಾರೆ. ನನ್ನ ಸಹೋದರ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನ್ಯಾಯ ಯಾತ್ರೆಯನ್ನು ಉತ್ತರಪ್ರದೇಶದಲ್ಲಿ ನಡೆಸಲಿದ್ದಾರೆ. ಅವರನ್ನು ವೆಲ್ಕಮ್ ಮಾಡಲು ಉತ್ತರಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ತುದಿಗಾಲಿನಲ್ಲಿ ನಿಂತಿದ್ದಾರೆಂದು ಪ್ರಿಯಾಂಕಾ ಹೇಳಿದ್ದಾರೆ.
‘ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಆದರೆ ಬಿಜೆಪಿಗರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ’
‘ಇದು ದೇವೇಗೌಡರ ಜಿಲ್ಲೆ, ಇಲ್ಲಿ ಕಾಂಗ್ರೆಸ್‌ಗೆ ಅನುಕೂಲ ಆಗಲ್ಲ ಅಂತ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ್ದಾರೆ’
‘ನಮ್ಮ ಹಾಸನ ಜಿಲ್ಲೆಗೆ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಸಂಪೂರ್ಣ ಫೇಲ್ಯೂರ್ ಆಗಿರುವ ಬಜೆಟ್’