ಕಾವೇರಿ ನೀರು‌ಬಿಟ್ಟು ಇವತ್ತು ನೀರಿಗೆ‌ ಹಾಹಾಕಾರ ಅಂದ್ರೆ‌ ಹೇಗೆ?: ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ವಿಜಯೇಂದ್ರ

Political News: ಬೆಂಗಳೂರಿನ ಜಿ.ಎಂ. ರಿಜಾಯ್ಸ್” (G.M Rejoyz) ಹೋಟೆಲ್‍ನಲ್ಲಿ ನೂತನ   ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರ ಉದ್ಘಾಟನೆ ಮಾಡಲಾಯಿತು. ಈ ವೇಳೆ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಚುನಾವಣೆ ಸಮಯದಲ್ಲಿ ಮಾಧ್ಯಮಗಳ‌ ಪಾತ್ರ ದೊಡ್ಡದು. ಮಾಧ್ಯಮ ಕೇಂದ್ರದಲ್ಲಿ ಎಲ್ಲಾ‌ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯ, ರಾಷ್ಟ್ರೀಯ ನಾಯಕರು ಇದೇ‌ ನೂತನ ಮಾಧ್ಯಮ ಕೇಂದ್ರದಲ್ಲೇ ಸುದ್ದಿಗೋಷ್ಟಿ ನಡೆಸಲಿದ್ದಾರೆ ಎಂದರು.

ಈ ದೇಶದ ಜನತೆ‌ ನರೇಂದ್ರ ಮೋದಿ ಅವರ ನಾಯಕತ್ವವನ್ನ‌ ಒಪ್ಪಿಕೊಂಡಿದಾರೆ. ಮೋದಿ‌ ಅವರ ಸಂಕಲ್ಪ ‌ದೇಶದ ಅಭಿವೃದ್ಧಿ. ಈ‌ ನಿಟ್ಟಿನಲ್ಲಿ ಮತ್ತೊಮ್ಮೆ ಮೋದಿ‌ ಘೋಷಣೆ ಕೇಳಿಬರ್ತಿದೆ. ಕರ್ನಾಟಕ ದಕ್ಷಿಣ ಭಾರತದಲ್ಲೇ ಬಿಜೆಪಿ ಹೆಬ್ಬಾಗಿಲು. ಮತ್ತೆ ಅದನ್ನು ಸಾಬೀತು ಮಾಡಬೇಕಾಗಿದೆ. ರಾಜ್ಯದಲ್ಲಿ ನಿಷ್ಕ್ರಿಯ ಕಾಂಗ್ರೆಸ್ ಸರ್ಕಾರ ಇದೆ. ಬರದ ವಿಚಾರದಲ್ಲಿ ಸಂಪೂರ್ಣ ವಿಫಲ. ರೈತರು ಆತ್ಮಹತ್ಯೆ ಮಾಡಿಕೊಂಡರು‌ ಮುಖ್ಯಮಂತ್ರಿ ಎಚ್ಚೆತ್ತುಕೊಳ್ಳದಿರುವುದು ದುರಂತ. ಕಾವೇರಿ ನೀರು‌ಬಿಟ್ಟು ಇವತ್ತು ನೀರಿಗೆ‌ ಹಾಹಾಕಾರ ಅಂದ್ರೆ‌ ಹೇಗೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ತಮಿಳುನಾಡಿಗೆ ನೀರು‌ ಬಿಡುವಾಗ ಜ್ಞಾನೋದಯ ಆಗ ಬೇಕಿತ್ತು. ಕಾವೇರಿಗೆ ನೀರು ಬಿಟ್ಟಿದ್ದರಿಂದ ನದಿಗಳು ಬತ್ತಿವೆ. ಕಾಂಗ್ರೆಸ್ ಅಭಿವೃದ್ಧಿ ಶೂನ್ಯ ಸರ್ಕಾರ. ಅಲ್ಪಸಂಖ್ಯಾತರ ತುಷ್ಟೀಕರ ಮಾಡ್ತಿದೆ. ಬಿಎಸ್ ವೈ, ಬೊಮ್ಮಾಯಿ ಕೊಟ್ಟಿರುವ ಯೋಜನೆಗಳ ಬಗ್ಗೆ ಜನರು ಮರೆತಿಲ್ಲಾ.ಅಯೋಧ್ಯೆ ರಾಮಮಂದಿರ ಬಿಜೆಪಿಯ ಹೋರಾಟ. ಪ್ರತಿಯೊಬ್ಬ ಭಾರತೀಯರ ಕನಸು. ಆರ್ಟಿಕಲ್ 370 ಮ್ಯಾನಿಫೆಸ್ಟೋದಲ್ಲಿ ಹೇಳಿದ್ವಿ ಎಂದಿದ್ದಾರೆ.

ಮೇಕೆದಾಟು ವಿಚಾರವಾಗಿ ಉತ್ತರ ನೀಡಬೇಕಾದವರು ಕಾಂಗ್ರೆಸ್ ನವರು, ಡಿಸಿಎಂ. ಎಲ್ಲಾ ಬಂಡಾಯ ಶಮನವಾಗುತ್ತದೆ, ಎಲ್ಲವೂ ತಿಳಿಯಾಗುತ್ತದೆ. ಎಲ್ಲಾರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ. ಎಲ್ಲಾ ಕ್ಷೇತ್ರ ಗೆಲ್ಲುವ ಮೂಲಕ ಕಾಂಗ್ರೆಸ್ ಗೆ ಉತ್ತರ ಕೊಡುತ್ತೇವೆ. ನಮ್ಮ ಮುಂದೆ ಎರಡು ಗುರಿ ಇದೆ. ಲೋಕಸಭೆಯಲ್ಲಿ ಎಲ್ಲಾ ಕ್ಷೇತ್ರ ಗೆಲ್ಲಬೇಕು. ಮುಂದಿನ‌ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.

ಸದಾನಂದಗೌಡರು ಪಕ್ಷ ಶುದ್ಧೀಕರಣ ಮಾಡ್ತೇವೆ ಎಂಬ ಹೇಳಿಕೆಗೆ‌ ಬಿವೈ ವಿಜಯೇಂದ್ರ‌ ಪ್ರತಿಕ್ರಿಯಿಸಿದ್ದು,  ಎಲ್ಲವೂ ಸರಿಯಾಗಲಿದೆ.. ಎಲ್ಲವೂ ತಿಳಿಯಾಗಿದೆ.. ಎಲ್ಲವೂ‌ ಬಗೆಹರಿದಿದೆ ಎಂದಿದ್ದಾರೆ.

ಕುಟುಂಬ ರಾಜಕಾರಣದ ಬಗ್ಗೆ ಸ್ಪಷ್ಟನೆ ನೀಡ್ತೀನಿ. ಹಿಂದೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೆ. ಆಗ ಹೈಕಮಾಂಡ್ ಸ್ಪರ್ಧೆ ಮಾಡಲು ಒಪ್ಪಲಿಲ್ಲ. ಬೊಮ್ಮಾಯಿ ಅವರು ಸಿಎಂ‌ ಆಗಿದ್ದಾಗ ನನ್ನ ವಿಧಾನಪರಿಷತ್ ಸದಸ್ಯ ಮಾಡಲು ಕೋರ್ ಕಮಿಟಿ ತೀರ್ಮಾನ ಮಾಡಿತು. ಆದ್ರೆ ಅದಕ್ಕೂ ಹೈಕಮಾಂಡ್ ಒಪ್ಪಲಿಲ್ಲ.ಪಕ್ಷದ ತೀರ್ಮಾನ ಅಂತ ನಾನೂ ಒಪ್ಪಿಕೊಂಡೆ.  ನಮ್ಮ‌ ರಾಷ್ಟ್ರೀಯ ಅಧ್ಯಕ್ಷರು ವಿಜಯೇಂದ್ರ ಆಯ್ಕೆ ಯಾಕೆ ಅಂತ‌ ತಿಳಿಸಿದ್ದಾರೆ. ಬಹಳ ಸ್ಪಷ್ಟವಾಗಿ ಹೇಳ್ತೀನಿ ಕುಟುಂಬ ರಾಜಕಾರಣ ಇಲ್ಲ. ನನಗೆ ಹೇಳಲು ಸಂಕೋಚವೂ ಇಲ್ಲ. ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬರಲು ಸಾಧ್ಯವಿಲ್ಲ. ಇದಕ್ಕೆ‌ಮೋದಿ ಅವರ ಜನಪ್ರಿಯತೆ ಕಾರಣ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಾನು ಬದುಕಿರುವವರೆಗೆ ಕನ್ನಡಿಗನೇ, ಆರ್.ಸಿ.ಬಿ ಯ ಹೆಮ್ಮೆಯ ಅಭಿಮಾನಿಯೇ: ಸಿಎಂ ಸಿದ್ದರಾಮಯ್ಯ

ಭೂತಾನ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ.. ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವ

ಮೊಣಕಾಲಿನಲ್ಲಿ ನಡೆದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಜಾನ್ವಿ ಕಪೂರ್

About The Author