Sandalwood: ಯುವ ನಿರ್ದೇಶಕರು ಯಾವ ರೀತಿ ಸಿನಿಮಾ ಮಾಡುತ್ತಿದ್ದಾರೆ, ನಿಮಗೆ ಆ ಸಿನಿಮಾಳ ಬಗ್ಗೆ ಏನೆನ್ನಿಸುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ಅವರು, ಸು ಫ್ರಂ ಸೋ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಸು ಫ್ರಂ ಸೋ ಬಗ್ಗೆ ಮಾತನಾಡಿರುವ ನಿರ್ದೇಶಕರು, ನನಗೆ ಇತ್ತೀಚೆಗೆ ಇಷ್ಟವಾಗಿರುವ ಸಿನಿಮಾ ಅಂದ್ರೆ ಸುಲೋಚನಾ ಫ್ರಮ್ ಸೋಮೇಶ್ವರ. ಇದರಲ್ಲಿ ಎಲ್ಲ ಕಲಾವಿದರೂ ಪ್ರಾದೇಶಿಕ ಕಲಾವಿದರು. ಪ್ರಾದೇಶಿಕ ಭಾಷೆ, ಅಲ್ಲಿಯ ಕಲೆ, ಕಂಟೆಂಟ್ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಮೂಢನಂಬಿಕೆ ಇದ್ದರೂ ಅದು ಪೂರ್‌ತಿ ನಿಜವಲ್ಲ ಅಂತಾ ತೋರಿಸಲಾಗಿದೆ. ಹೀಗೆ ಎಲ್ಲ ರೀತಿಯಿಂದಲೂ ಅದು ಉತ್ತಮ ಸಿನಿಮಾ ಅಂತಾ ನನಗನ್ನಿಸಿತು ಅಂತಾರೆ ನಿರ್ದೇಶಕರು.
ಇನ್ನು ನಾಗತೀಹಳ್ಳಿ ಚಂದ್ರಶೇಖರ್ ಅವರು ಆಗಲೇ ಬಾಲಿವುಡ್ ನಟ ಅಮಿತಾಬ್ ಅವರಿಗೆ ತಮ್ಮ ಸಿನಿಮಾದಲ್ಲಿ ಆ್ಯಕ್ಷನ್ ಕಟ್ ಹೇಳಿದವರು. ಆ ಅನುಭವದ ಬಗ್ಗೆ ಕೇಳಿದಾಗ, ಅಮಿತಾಬ್ ಅವರು ನಟನಾಗಿ ಬರಲಿಲ್ಲ, ಕಲಾವಿದನಾಗಿ ಬಂದರು. ಸಂಭಾವನೆ ಬಗ್ಗೆ ನಾನು ಮುಂಚೆಯೇ ಮಾತನಾಡಿದ್ದೆ. ನನಗೆ ನಿಮ್ಮ ಬಜೆಟ್ ನಲ್ಲಿ ಸಂಭಾವನೆ ನೀಡಲು ಸಾಧ್ಯವಿಲ್ಲ ಅಂತಾ ಹೇಳಿದ್ದೆ. ಅವರು ನಾನು ಈ ಪಾತ್ರ ಮಾಡುತ್ತೇನೆ. ನನಗೆ ಸಂಭಾವನೆ ಬೇಡ. ನನಗೆ ಈ ಪಾತ್ರ ಇಷ್ಟವಾಗಿದೆ. ಹಾಗಾಗಿ ಪಾತ್ರಕ್ಕಾಗಿ ನಾನು ನಟನೆ ಮಾಡಿದೆ. ಸಂಭಾವನೆಗಾಗಿ ಅಲ್ಲ ಎಂದು ಅಮಿತಾಬ್ ಅವರು ಹೇಳಿದರು ಅಂತಾ ನಾಗತೀಹಳ್ಳಿ ಚಂದ್ರಶೇಖರ್ ಬಿಗ್‌ಬಿ ಮಾತನ್ನು ನೆನಪಿಸಿಕ“ಂಡಿದ್ದಾರೆ.
ಆದರೆ ನಾಗತೀಹಳ್ಳಿ ಚಂದ್ರಶೇಖರ್ ಅವರು ಬಿಗ್‌ಬಿ ಅವರಿಗೆ ಸಂಭಾವನೆ ನೀಡದಿದ್ದರೂ, ಗಿಫ್ಟ್ ನೀಡಿದ್ದರಂತೆ. ಈ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

