Thursday, December 26, 2024

Latest Posts

ಎಂಪಿ ಟಿಕೆಟ್ ಸಿಕ್ಕ ಸೀಕ್ರೆಟ್ ಬಿಚ್ಚಿಟ್ಟ ಪ್ರತಾಪ್ ಸಿಂಹ..!

- Advertisement -

ಕರ್ನಾಟಕ ಟಿವಿ : ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಹೇಗೆ ಸಿಕ್ತು. ಕಳೆದ ಬಾರಿ ಸಂಸದರಾಗಿದ್ರು ಹಾಗಾಗಿ ಈ ಬಾರಿ ಟಿಕೆಟ್ ಸಿಕ್ತು ಅನ್ನೋದು ಕಾಮನ್ ಆನ್ಸರ್. ಆದ್ರೆ ಮೊದಲ ಬಾರಿ ಅಂದ್ರೆ 2014ರಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಹೇಗೆ ಸಿಕ್ತು ಅನ್ನೋದನ್ನ ಪ್ರತಾಪ್ ಸಿಂಹ ಬಹಿರಂಗ ಪಡಿಸಿದ್ದಾರೆ.. ಕಲರ್ಸ್ ಕನ್ನಡ ಚಾನಲ್ ನಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ರು.. ಈ ವೇಳೆ 2014ರಲ್ಲಿ ಪ್ರತಾಪ್ ಸಿಂಹ ಹೇಗೆ ಟಿಕೆಟ್ ಪಡೆದುಕೊಂಡ್ರು ಅನ್ನೋ ವಿಷಯವನ್ನ ಬಹಿರಂಗ ಪಡಿಸಿದ್ದಾರೆ..

ಮೋದಿ ಬಗ್ಗೆ ಪುಸ್ತಕ ಬರೆದು ಹತ್ತಿರವಾಗಿದ್ದ ಪ್ರತಾಪ್ ಪ್ರತಾಪ್ ಸಿಂಹ

ಪತ್ರಕರ್ತರಾಗಿದ್ದಾಗ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಭೇಟಯಾಗಿದ್ರು.. ನಂತರ ಗೋದ್ರಾ ಹತ್ಯಾಕಾಂಡದ ಕುರಿತಂತೆ ಮೋದಿ ಬಗ್ಗೆ ಪುಸ್ತಕ ಬರೆದಿದ್ರು.. ಆ ಪುಸ್ತಕ ಹಿಂದಿ, ಇಂಗ್ಲೀಷ್, ಸೇರಿದಂತೆ ಗುಜರಾತಿ ಭಾಷೆಗೂ ಅನುವಾದವಾಗಿತ್ತು.. ನಂತರ 2013ರಲ್ಲಿ ಪ್ರತಾಪ್ ಸಿಂಹ ಎರಡನೇ ಬಾರಿ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಮೋದಿಯನ್ನ ಭೇಟಿಯಾಗ್ತಾರೆ.. ಈ ವೇಳೆ ಆರ್. ಅಶೋಕ್ ಪ್ರತಾಪ್ ಸಿಂಹ ನಿಮ್ಮ ಬಗ್ಗೆ ಪುಸ್ತಕ ಬರೆದಿದ್ದಾರೆ ದೊಡ್ಡ ಪತ್ರಕರ್ತ ಅಂತ ಪರಿಚಯ ಮಾಡಿಕೊಡ್ತಾರೆ. ಆಗ ಮೋದಿ ಪ್ರತಾಪ್ ಸಿಂಹರನ್ನ ತಬ್ಬಿಕೊಂಡು ಈ ನನ್ನ ಸ್ನೇಹಿತ ಮೊದಲು ಸಣ್ಣ ಇದ್ರು ಈಗ ದಪ್ಪ ಆಗಿದ್ದಾರೆ ಅಂತ ಹೇಳ್ತಾರೆ.. ನಂತರ 2014ರ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಪ್ತರು ನೀವ್ಯಾಕೆ ರಾಜಕಾರಣಕ್ಕೆ ಬರಬಾರದು ಅಂತ.. ಆಗ ಮೋದಿಗೆ ಈ ಬಗ್ಗೆ ಮೇಲ್ ಮಾಡ್ತಾರೆ. ನಂತರ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುತ್ತೆ. ಇದನ್ನ ಪ್ರತಾಪ್ ಸಿಂಹ ಕನ್ನಡದ ಕೋಟ್ಯಾಧಿಪತಿಯಲ್ಲಿ ಹೇಳಿದ್ದಾರೆ..

- Advertisement -

Latest Posts

Don't Miss