Health tips: ಹೆಣ್ಣು ಮಕ್ಕಳು ತಾಯಿಯಾಗುವ ಮುನ್ನ ಹೂವಿನ ಬಳ್ಳಿಯಂತೆಯೇ ಇರುತ್ತಾರೆ. ಆದರೆ ಮಗುವಾದ ಬಳಿಕ, ಅವರ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ತೂಕವೂ ಹೆಚ್ಚುತ್ತದೆ. ಅಲ್ಲದೇ ಅವರ ದೇಹದ ತೂಕದ ಬಗ್ಗೆ ಮಾತನಾಡುವ ಅನಾಗರಿಕರ ಮಾತಿನಿಂದ ಮನಸ್ಸಿಗೆ ಬೇಸರವೂ ಆಗುತ್ತದೆ. ಹಾಗಾದ್ರೆ ಬಾಣಂತನದ ಬೊಜ್ಜನ್ನು ಕರಗಿಸುವುದು ಹೇಗೆ ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರೇ ಹೇಳಿದ್ದಾರೆ ನೋಡಿ.
ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನವಮಾಸ ಮುಟ್ಟಾಗಿರುವುದಿಲ್ಲ. ಹಾಗಾಗಿ ದೇಹದಿಂದ ಪ್ರತೀ ತಿಂಗಳು ಹೊರಗೆ ಹೋಗಬೇಕಾದ ರಕ್ತ, ಕೆಲವು ತ್ಯಾಜ್ಯಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗಿರುತ್ತದೆ. ಹಾಗಾಗಿ ನಮ್ಮ ದೇಹದ ಬೊಜ್ಜು ಬೆಳೆಯುತ್ತದೆ. ಅಲ್ಲದೇ, ಮಗು ಆಚೆ ಬಂದ ಬಳಿಕ, ಹೊಟ್ಟೆ ಸಡಿಲವಾಗುವುದರಿಂದ ಹೊಟ್ಟೆಯ ಬೊಜ್ಜು ಹೆಚ್ಚಾಗುವುದು ಕಾಮನ್ ಆಗಿರುತ್ತದೆ.
ಹಾಗಾಗಿ ಹಿಂದಿನ ಕಾಲದಲ್ಲಿ ಬಾಣಂತನದಲ್ಲಿ ಹೊಟ್ಟೆಗೆ ಬಟ್ಟೆ ಕಟ್ಟುತ್ತಿದ್ದರು. ಇದರಿಂದ ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತಿರಲಿಲ್ಲ. ಇನ್ನು ಬಾಣಂತಿಯರಿಗೆ ಕೆಲವರು ಕಾಫಿ, ಬ್ರೆಡ್, ಬಿಸ್ಕೇಟ್ ಕೊಡುತ್ತಾರೆ. ಇವೆಲ್ಲವೂ ದೇಹದ ಬೊಜ್ಜು ಹೆಚ್ಚಿಸುವ ಆಹಾರಗಳೇ.
ಇನ್ನು ಗರ್ಭಿಣಿಯಾಗಿದ್ದಾಗ ಮತ್ತು ಬಾಣಂತಿಯಾಗಿದ್ದಾಗ, ಎರಡೂ ಸಮಯದಲ್ಲಿ ಚೆನ್ನಾಗಿ ನೀರು ಕುಡಿಯಬೇಕು. ಆದರೆ ಇವೆರಡೂ ಸಮಯದಲ್ಲಿ ನೀರಿನ ಸೇವನೆ ಕಡಿಮೆಯಾದರೆ, ಬೊಜ್ಜು ಬೆಳೆಯುತ್ತದೆ. ಅದರಲ್ಲೂ ಬಾಣಂತಿಯರಿಗೆ ಬಿಸಿ ನೀರಿನ ಸೇವನೆ ಹೆಚ್ಚು ಮಾಡಲು ಹೇಳುತ್ತಾರೆ. ಏಕೆಂದರೆ ಬಾಣಂತನದಲ್ಲಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿದಷ್ಟು ಮಲಬದ್ಧತೆ ಸಮಸ್ಯೆ ಹೋಗುವ ಜೊತೆಗೆ, ಎದೆ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಮತ್ತು ದೇಹದ ತೂಕ ಕೂಡ ಕ್ರಮೇಣ ಕಡಿಮೆಯಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.