Beauty Tips: ಮೊಡವೆ ಅಥವಾ ಮೊಡವೆ ಕಲೆ ಅನ್ನೋದು ಸಾಮಾನ್ಯವಾಗಿ ಯುವಕ-ಯುವತಿ ಇಬ್ಬರಿಗೂ ಕಾಡುವ ಸಮಸ್ಯೆಯಾಗಿದೆ. ನಾವು ಸೇವಿಸುವ ಆಹಾರದಲ್ಲಿ ಸಮಸ್ಯೆ ಇದ್ದಾಗ, ಅನಾರೋಗ್ಯಕರ ಆಹಾರ ಸೇವನೆ ಮಾಡಿದಾಗ ಅಥವಾ ಹಾರ್ಮೋನ್‌ನಲ್ಲಿ ಸಮಸ್ಯೆ ಆದಾಗ, ಮೊಡವೆ ಆಗುತ್ತದೆ. ಆದರೆ ಮೊಡವೆ ಹೋದರೂ ಅದರ ಕಲೆ ಮಾತ್ರ ಹಾಗೇ ಇರುತ್ತದೆ. ಆ ಕಲೆ ಹೋಗಲು ಏನು ಮಾಡಬೇಕು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
ಮೊಡವೆ ಕಲೆ ಹೋಗಲಾಡಿಸಲು ವೈದ್ಯರು ಬೇರೆ ಬೇರೆ ರೀತಿಯ ಚಿಕಿತ್ಸೆ ನೀಡುತ್ತಾರೆ. ಅವರು ಕ್ರೀಮ್, ಮಾತ್ರೆ ಎಲ್ಲವೂ ನೀಡಿದರೂ ನಿಮ್ಮ ಸ್ಕಿನ್ ಸಮಸ್ಯೆ ಹೋಗದಿದ್ದಲ್ಲಿ, ಲೇಸರ್ ಚಿಕಿತ್ಸೆ ಕೂಡ ನೀಡುತ್ತರೆ. ಪೀಲ್ ಮಾಸ್ಕ್ ಹಾಕಿ, ನಿಮ್ಮ ಸ್ಕಿನ್ ಲೈಟ್ ಆಗುವ ರೀತಿ ಮಾಡುತ್ತಾರೆ. ಟ್ಯಾಟೂ ಹಾಕಿಸಿದಾಗಲೂ, ಅದನ್ನು ಕೂಡ ಲೇಸರ್ ಚಿಕಿತ್ಸೆ ಮೂಲಕ ತೆಗೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




