Health Tips: ಋತುಚಕ್ರ ನಿಲ್ಲುವ ಸಮಯದಲ್ಲಿ ಹೆಂಗಸರು ಅನುಭವಿಸುವ ಕಷ್ಟ ಅವರಿಗಷ್ಟೇ ಗೊತ್ತಿರುತ್ತದೆ. ಎಲ್ಲರಿಗೆ ಒಂದು ರೀತಿಯ ಅನುಭವವಾದರೆ, ಮುಟ್ಟು ನಿಲ್ಲುವ ಹೆಂಗಸರಿಗೆ ಆಗುವ ಅನುಭವವೇ ಬೇರೆ. ಎಲ್ಲರಿಗೂ ಸೆಕೆಯಾದರೆ, ಇವರಿಗೆ ಚಳಿಯಾಗುತ್ತದೆ. ಎಲ್ಲರಿಗೂ ಚಳಿಯಾದರೆ, ಇವರಿಗೆ ಸೆಕೆಯಾಗುತ್ತದೆ. ಹಾಗಾದ್ರೆ ಋತುಚಕ್ರದ ಅಂತ್ಯದಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.
ವಯಸ್ಸು 14ರಿಂದ 16 ತುಂಬುವುದರೊಳಗೆ ಋತುಚಕ್ರ ಶುರುವಾಗುತ್ತದೆ ಮತ್ತು 55 ವರ್ಷವಾಗುವ ಹೊತ್ತಿಗೆ ಋತುಚಕ್ರ ನಿಲ್ಲುತ್ತದೆ. ಹೀಗೆ ಋುತುಚಕ್ರ ನಿಂತಾಗ, ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಬರಬಾರದು ಅಂದ್ರೆ, ಪ್ರತೀ ತಿಂಗಳು ಸರಿಯಾದ ಸಮಕ್ಕೆ ಋತುಮತಿಯಾಗಬೇಕು. ಸರಿಯಾಗಿ ರಕ್ತಸ್ರಾವವಾಗಬೇಕು. ರಕ್ತಸ್ರಾವ ಹೆಚ್ಚಾಗಿಯೂ ಇರಬಾರದು, ಕಡಿಮೆಯೂ ಇರಬಾರದು.
ಹೀಗೆಲ್ಲ ಆಗಬೇಕು ಅಂದ್ರೆ, ನಾವು ಆರೋಗ್ಯಕರ ಆಹಾರ ಸೇವನೆಯ ಜೊತೆಗೆ, ಸರಿಯಾಗಿ ವ್ಯಾಯಾಮ, ವಾಕಿಂಗ್ ನಿದ್ರೆಯನ್ನೂ ಮಾಡಬೇಕು. ಅತೀಯಾಗಿ ಜಂಕ್ ಫುಡ್, ಟೀ ಕಾಫಿ ಸೇವನೆ ಮಾಡುವುದು, ಬೇಕರಿ ತಿಂಡಿ, ಕೂಲ್ ಡ್ರಿಂಕ್ಸ್ ಸೇವನೆ ಇವೆಲ್ಲವೂ ನಮ್ಮ ಆರೋಗ್ಯ ಹಾಳಾಗುವುದರ ಜೊತೆಗೆ, ಋತುಚಕ್ರಕ್ಕೆ ಸಮಸ್ಯೆ ತರುತ್ತದೆ. ಹಾಗಾಗಿ ಇದೆಲ್ಲ ಆಹಾರ ಸೇವನೆ ತ್ಯಜಿಸಿದರೆ, ಉತ್ತಮ. ಆರೋಗ್ಯಕರ ಆಹಾರ ಸೇವನೆ ಮಾಡಬೇಕು.
ಇನ್ನು ನಿಮಗೆ ಬಿಳಿಮುಟ್ಟಿನ ಸಮಸ್ಯೆ, ರಕ್ತಕಡಿಮೆಯಾಗುವುದು, ದೇಹದ ತೂಕ ಅತೀಯಾಗುವುದು ಇದೆಲ್ಲ ಆದಾಗ, ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ಮತ್ತು ಆರೋಗ್ಯಕರ ಆಹಾರ ಸೇವನೆಯ ಮೂಲಕ, ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಇದರ ಜೊತೆಗೆ ಹೆಣ್ಣು ಮಕ್ಕಳು ಮಾಡುವ ಇನ್ನೊಂದು ತಪ್ಪು ಅಂದ್ರೆ, ಹೆಚ್ಚು ಪ್ರಿಪೋನ್, ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಳ್ಳುವುದು. ಈ ಎಲ್ಲ ತಪ್ಪುಗಳನ್ನು ಮಾಡಲೇಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.