Friday, June 20, 2025

Latest Posts

ಕೆಜಿಎಫ್ -2 ಟೀಸರ್ ನೋಡಿ ಬಾಲಿವುಡ್ ನಟ ಹೃತಿಕ್ ರೋಷ ನ್ ಹೇಳಿದ್ದೇನು..?

- Advertisement -

ಬಹುನಿರೀಕ್ಷಿತ್ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ ಟೀಸರ್ ಯೂಟ್ಯೂಬ್ ನಲ್ಲಿ ಹಲ್ ಚಲ್ ಎಬ್ಬಿಸ್ತಿದ್ದು, ರಾಕಿ ಅಭಿಮಾನಿ ಬಳಗಕಕ್ಕೆ ಹಬ್ಬದೂಟ ಬಡಿಸಿದಂತಾದೆ. ದೇಶ-ವಿದೇಶಗಳಲ್ಲೂ ಹವಾ ಎಬ್ಬಿಸ್ತಿರೋ ಟೀಸರ್ ನೋಡಿ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ಕೆಜಿಎಫ್-2 ಟೀಸರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರೋ ಹೃತಿಕ್ ರೋಷನ್, ವಾಟ್ ಎ ಗ್ರೇಟ್ ಟೀಸರ್.. ಇಡೀ ಚಿತ್ರತಂಡ ಅಭಿನಂದನೆ. ಹುಟ್ಟುಹಬ್ಬದ ಶುಭಾಶಯ ಯಶ್ ಎಂದು ಬರೆದು ಕೆಜಿಎಫ್-2 ಟೀಸರ್ ಲಿಂಕ್ ಶೇರ್ ಮಾಡಿದ್ದಾರೆ.

ಯಶ್ ಹುಟ್ಟುಹಬ್ಬದ ಪ್ರಯುಕ್ತ ಇಂದು ರಿಲೀಸ್ ಆಗಬೇಕಿದ್ದ ಕೆಜಿಎಫ್-2 ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದಕ್ಕೆ ನಿನ್ನೆಯೇ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ.

- Advertisement -

Latest Posts

Don't Miss