Saturday, October 5, 2024

Latest Posts

ಬೆಟ್ಟಿಂಗ್ ಅಖಾಡದಲ್ಲಿಲ್ಲ ದೇವೇಗೌಡ್ರ ಹವಾ- ತುಮಕೂರಲ್ಲಿ ಬಿಜೆಪಿ ಗೆಲ್ಲೋದು ನಿಜವಾ…?

- Advertisement -

ತುಮಕೂರು: ಚುನಾವಣೆ ಹತ್ತಿರವಾಗ್ತಿದ್ದಂತೆಯೇ ಕೆಲವೆಡೆ ಬೆಟ್ಟಿಂಗ್ ಚುರುಕುಗೊಂಡಿತ್ತು. ತುಮಕೂರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಬಿಜೆಪಿಯ ಬಸವರಾಜು ಎದುರು ಸ್ಪರ್ಧೆ ಮಾಡಿರೋದು ಬೆಟ್ಟಿಂಗ್ ಪ್ರಿಯರ ಕುತೂಹಲ ಹೆಚ್ಚಿಸಿತ್ತು. ಹೀಗಾಗಿ ತುಮಕೂರಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ್ರು ಗೆದ್ದೇ ಗೆಲ್ತಾರೆ ಅಂತ ಬೆಟ್ಟಿಂಗ್ ಕಟ್ಟೋಕೆ ದುಂಬಾಲು ಬಿದ್ದಿದ್ರು. ಹಾಸನದಿಂದ ಬಂದು ತುಮಕೂರಲ್ಲೂ ಬೆಟ್ ಕಟ್ಟುತ್ತಿದ್ದವರೂ ಇದ್ದರು. ಆದ್ರೆ ಇದೀಗ ದೇವೇಗೌಡರ ಪರ ಬೆಟ್ಟಿಂಗ್ ಕಟ್ಟಿದವರು ಕೈ ಕೈ ಹಿಸುಕಿಕೊಳ್ತಿದ್ದಾರಂತೆ. ಗೌಡ್ರು ಗೆಲ್ತಾರೆ, 50ಸಾವಿರ ಬೇಡ ಬೇಕಾದ್ರೆ 1ಲಕ್ಷ ಬೆಟ್ ಕಟ್ತೀನಿ ಅಂತಿದ್ದೋವ್ರೆಲ್ಲಾ ಸೈಲೆಂಟ್ ಆಗಿಬಿಟ್ಟಿದ್ದಾರಂತೆ.

ರಾಜಕೀಯ ಪಡಸಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಗೆಲುವು ಸಾಧಿಸ್ತಾರೆ ಅನ್ನೋ ವಿಮರ್ಶೆ ಹೆಚ್ಚಾಗಿರೋದೇ ಇದಕ್ಕೆ ಕಾರಣವಂತೆ. ಮೊದಲೆಲ್ಲಾ, ದೇವೇಗೌಡರ ಪರ ಮೇ 10ರ ನಂತರ ಬೆಟ್ಟಿಂಗ್ ಕಟ್ಟೋಣ ಎನ್ನುತಿದ್ದವರೆಲ್ಲಾ ಈಗ ಬೇಡ ಬೇಡ ರಿಸಲ್ಟ್ ಅಂದಾಜೇ‌ ಸಿಗುತಿಲ್ಲ ಅಂತಿದ್ದಾರಂತೆ.

ಇನ್ನು ಈ ಬೆಟ್ಟಿಂಗ್ ರೇಸ್ ನಲ್ಲೇನೋ ದೇವೇಗೌಡರ ಕ್ರೇಜ್ ಕಮ್ಮಿಯಾಗಿದೆ. ಆದ್ರೆ ದೇವೇಗೌಡ್ರು ಗೆಲ್ತಾರಾ ಇಲ್ಲಾ ಬಸವರಾಜು ಗೆಲ್ತಾರಾ ಅನ್ನೋದು ಮೇ.23ರ ಫಲಿತಾಂಶದಂದು ತಿಳಿಯುತ್ತೆ.

- Advertisement -

Latest Posts

Don't Miss