Thursday, November 30, 2023

Latest Posts

‘ನಾನು ಎಲ್ಲರೂ ಇದ್ದೂ ತಬ್ಬಲಿ’- ಭವಾನಿ ರೇವಣ್ಣ ಕಣ್ಣೀರು

- Advertisement -

ಹಾಸನ: ನನಗೆ ಎಲ್ಲರೂ ಇದ್ದಾರೆ, ಎಲ್ಲವೂ ಇದೆ. ಆದ್ರೆ ನನ್ನ ತಂದೆ-ತಾಯಿ ಮಾತ್ರ ಇಲ್ಲ ಅಂತ ತಮ್ಮ ಪೋಷಕರನ್ನು ನೆನೆದು ಹಾಸನ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು  ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಕಣ್ಣೀರು ಹಾಕಿದ್ದಾರೆ.

ಹಾಸನದ ಕಾಮಧೇನು ವೃದ್ಧಾಶ್ರಮದಲ್ಲಿ ತಮ್ಮ ಮಾವ ದೇವೇಗೌಡರ ಹುಟ್ಟುಹಬ್ಬ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭವಾನಿ ತಮ್ಮ ಪೋಷಕರನ್ನು ನೆನೆದು ಕಣ್ಣೀರು ಹಾಕಿದ್ರು. ನಾನು ಚಿಕ್ಕ ವಯಸ್ಸಿನಲ್ಲಿಯೇ ನನ್ನ‌ತಂದೆ ತಾಯಿ ಕಳೆದುಕೊಂಡೆ, ನನಗೆ ಎಲ್ಲರೂ ಇದ್ದಾರೆ, ಅಧಿಕಾರ ಇದೆ, ಜನ ಇದ್ದಾರೆ, ಆದ್ರೆ ನನ್ನ ತಂದೆ ತಾಯಿ ಮಾತ್ರ  ಇಲ್ಲ ಅಂತ ಸಮಾರಂಭದಲ್ಲಿ ಭಾವುಕರಾದ  ಭವಾನಿ ರೇವಣ್ಣ, ನಾನು ಯಾವಾಗಲೂ ದೇವರ ಬಳಿ ಕೇಳಿಕೊಳ್ಳುವುದು ನನ್ನ ಹಿತೈಷಿಗಳನ್ನು ಕಾಪಾಡು ಎಂದು‌ ಭಗವಂತನಲ್ಲಿ‌ ಕೇಳಿಕೊಳ್ಳುತ್ತೇನೆ. ಯಾಕಂದ್ರೆ  ಅವರೇ ನಮ್ಮ‌ಶತ್ರುಗಳನ್ನು ನೋಡಿಕೊಳ್ಳುತ್ತಾರೆ ಅಂತ ಹೇಳಿದ್ರು.

‘ದೇವೇಗೌಡರು ರಾಜ್ಯದ ಪಾಲಿಗೆ ತಂದೆ ಸ್ಥಾನದಲ್ಲಿದ್ದಾರೆ’

ಬಳಿಕ ಮಾತನಾಡಿದ ಭವಾನಿ, ದೇವೇಗೌಡರು ನಮ್ಮ‌ತಂದೆಯ ಸ್ಥಾನದಲ್ಲಿದ್ದಾರೆ. ಇಡೀ ಜಿಲ್ಲೆ ಮತ್ತು ಕರ್ನಾಟಕದ ಪಾಲಿಗೆ ತಂದೆಯ ಸ್ಥಾನದಲ್ಲಿದ್ದಾರೆ. ಅವರ ಹುಟ್ಟುಹಬ್ಬ ಆಚರಿಸೋದು ಸಂತೋಷ ವಿಚಾರ. ಸತ್ಯನಾರಾಯಣ ಪೂಜೆ ಇರೋದ್ರಿಂದ ನಾನು ಬೆಂಗಳೂರಿನ ಕಡೆ ಹೋಗಲಿಲ್ಲ.  ಇನ್ನು‌ಮುಂದೆ ನಾನು ಪ್ರತೀ ವರ್ಷ ದೇವೇಗೌಡರ ಹುಟ್ಟುಹಬ್ಬಕ್ಕೆ ಇಲ್ಲಿಗೇ ಬರುತ್ತೇನೆ ಅಂತ ಹೇಳಿದ್ರು.

- Advertisement -

Latest Posts

Don't Miss