Tuesday, October 15, 2024

Latest Posts

ಶಾರ್ಟ್ ಮೂವಿ ಆದ್ರೂ ಸಖತ್ ಸಂದೇಶ ಸಾರೋ ‘B +’

- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಸಿನಿಮಾ ಮಾಡ್ಬೇಕು ಅಂತ ಬರೋವ್ರ ಸಂಖ್ಯೆಗೇನೂ ಕಡಿಮೆ ಇಲ್ಲ. ಪ್ರತಿಯೊಬ್ಬರಲ್ಲೂ ಉತ್ಸಾಹ, ಜೊತೆಗೆ ಆಕಾಶದಷ್ಟು ಕನಸು. ಆದ್ರೆ ಅವರಲ್ಲಿ ಗುರುತಿಸಿಕೊಳ್ಳುವವರ ಸಂಖ್ಯೆ ಕೂಡ ತುಂಬಾನೇ ಕಡಿಮೆ. ಅಂತಹುದರಲ್ಲಿ ಹೊಸಬರ ತಂಡವೊಂದು ಕಿರುಚಿತ್ರದ ಮೂಲಕ ಸೋಷಿಯಲ್ ಮೀಡಿಯಾ ದಲ್ಲಿ ಹೊಸ ಟ್ರೆಂಡ್ ಅನ್ನೇ ಹುಟ್ಟು ಹಾಕಿದೆ. ಹೌದು ನೋಡಿ YouTube ಅಲ್ಲಿ ಸಿಗುವ ಸಾವಿರಾರು ಕಿರುಚಿತ್ರಗಳ ಮಧ್ಯೆ ಈಗ ‘B +’ ಅನ್ನೋ ಕನ್ನಡ ಕಿರುಚಿತ್ರ ತುಂಬಾನೇ ಸೌಂಡ್ ಮಾಡ್ತಿದೆ. ಈ ಚಿತ್ರಕ್ಕೆ ಯುವ ಪ್ರತಿಭೆ ಲಕ್ಷ್ಮೀ ರಮೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಕೆಲವೊಮ್ಮೆ ನಾವು ಮಾಡೋ ಚಿಕ್ಕ ಸಮಸ್ಯೆಯಿಂದ ಎಷ್ಟೆಲ್ಲಾ ತೊಂದರೆ ಎದುರಾಗುತ್ತೆ ಅನ್ನೋದಕ್ಕೆ ಈ ಚಿತ್ರವೇ ಸಾಕ್ಷಿ. ಈ ಕಿರುಚಿತ್ರ ನಿಮಗೂ ಕೂಡ ಇಷ್ಟವಾಗುತ್ತೆ ಅನ್ನೋದು ಚಿತ್ರತಂಡದ ವಿಶ್ವಾಸ.

ಅಂದಹಾಗೆ ಎಲ್ಲಿ ನೋಡೋದು ಈ ಕಿರುಚಿತ್ರವನ್ನ ಅಂತ ಕನ್ಫ್ಯೂಸ್ ಆಗ್ಬೇಡಿ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ  ಬಿಡುಗಡೆಯಾಗಿದ್ದು B+ (ಬಿ ಪ್ಲಸ್) ಎಂಬ ಟೈಟಲ್ ನಲ್ಲಿದೆ. ಈ ಹೊಸ ತಂಡದಿಂದ ಸಮಾಜಕ್ಕೆ ಸಂದೇಶ ಸಿಗೋ ಮತ್ತಷ್ಟು ಕಥೆಗಳು, ಕಿರುಚಿತ್ರಗಳು ಬರಲಿ ಅನ್ನೋದೇ ನಮ್ಮ ಆಶಯ.

- Advertisement -

Latest Posts

Don't Miss