Wednesday, November 29, 2023

Latest Posts

ಸಾಂಭಾಜಿ ರಾವ್ ಪಾಟೀಲ್ ನಿಧನಕ್ಕೆ ಸಚಿವ ಡಿಕೆಶಿ ಸಂತಾಪ

- Advertisement -


ಹಿರಿಯ ರಾಜಕಾರಣಿ, ಮಾಜಿ ಶಾಸಕ ಸಾಂಭಾಜಿ ರಾವ್ ಪಾಟೀಲ್ ಅವರ ನಿಧನಕ್ಕೆ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

ಬಹುಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಸಾಂಭಾಜಿ ರಾವ್ ಪಾಟೀಲ್ ಅವರು ಶುಕ್ರವಾರ ವಿಧಿವಶರಾಗಿದ್ದು, ಸಚಿವರು ಸಂತಾಪ ಸೂಚಿಸಿದ್ದು ಹೀಗೆ…

‘ಬೆಳಗಾವಿಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ರಾಜಕಾರಣಿ ಸಾಂಭಾಜಿ ರಾವ್ ಪಾಟೀಲ್ ಅವರ ನಿಧನದ ಸುದ್ದಿ ಬೇಸರ ತಂದಿದೆ. ಅವರ ಜತೆಗಿನ ನನ್ನ ಒಡನಾಟ ಮರೆಯಲಾಗದಂತದ್ದು. ಅವರು ಓರ್ವ ಹುಟ್ಟು ಹೋರಾಟಗಾರ. ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ಸಮರ್ಪಿಕೊಂಡಿದ್ದರು.

ನಾಲ್ಕು ಬಾರಿ ಮೇಯರ್ ಆಗಿ, ಶಾಸಕರಾಗಿ ಸಾಕಷ್ಟು ಜನಪ್ರಿಯ ಕೆಲಸಗಳನ್ನು ಮಾಡಿದ್ದ ಸಾಂಭಾಜಿ, ಅಪಾರ ಜನಬಲ ಹೊಂದಿದ್ದರು. ಅವರು ರಾಜಕೀಯವಾಗಿ ಪ್ರಬಲರಾಗಿದ್ದರು. ಎಲ್ಲ ಪಕ್ಷದವರು ಚುನಾವಣೆ ಸಂದರ್ಭದಲ್ಲಿ ಅವರ ಬೆಂಬಲವನ್ನು ಅವಲಂಬಿಸಿದ್ದರು.

ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಈ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ರು.

- Advertisement -

Latest Posts

Don't Miss