Sunday, March 3, 2024

Latest Posts

ಸುಮಲತಾಗೆ ಸಪೋರ್ಟ್ ಮಾಡಿದ್ದು ನಾವಾ.. ಅವ್ರಾ..? – ಸಿದ್ದು

- Advertisement -

ಹುಬ್ಬಳ್ಳಿ: ಮಂಡ್ಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಕಾಂಗ್ರೆಸ್ ಸಪೋರ್ಟ್ ಮಾಡಿದೆ ಅನ್ನೋ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದು, ಈ ತರಹ ಬೆಂಕಿ ಹಚ್ಚೋದ್ರಲ್ಲಿ ಬಿಜೆಪಿಗರು ನಿಸ್ಸೀಮರು. ಸುಳ್ಳು ಹೇಳೋದು ಬಿಟ್ರೆ ಅವರಿಗೇನೂ ಗೊತ್ತಿಲ್ಲ ಅಂದ್ರು. ಅಲ್ಲದೆ ಚುನಾವಣೆಯಲ್ಲಿ ಸಪೋರ್ಟ್ ಮಾಡಿದ್ದು ನಾವಾ ಅವರಾ ಅಂತ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ದೋಸ್ತಿ ಸರ್ಕಾರ ಸುಭದ್ರವಾಗಿರುತ್ತೆ

ಇನ್ನು ಬಿಜೆಪಿ ನಾಯಕರು ಪದೇ ಪದೇ ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ ಅಂತ ಹೇಳಿಕೆ ನೀಡುತ್ತಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದು, ದೋಸ್ತಿ ಸರ್ಕಾರ ಇನ್ನೂ 4 ವರ್ಷ ಸುಭದ್ರವಾಗಿರುತ್ತೆ. ಬಿಜೆಪಿಯವ್ರಿಗೆ ಹೇಳಿಕೊಳ್ಳಲು ಏನೂ ವಿಷಯವಿಲ್ಲ. ಅದಕ್ಕೆ ಈ ರೀತಿ ಸುಳ್ಳು ಹೇಳುತ್ತಾ ಓಡಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

- Advertisement -

Latest Posts

Don't Miss