ಬೆಳಗ್ಗಿನಿಂದ ಸಿದ್ದು ಸರಣಿ ಟ್ವೀಟು- ವಿಶ್ವನಾಥ್ ಮೇಲೆ ಫುಲ್ ಸಿಟ್ಟು

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ. ನಿನ್ನೆಯೆಲ್ಲಾ ಲೇವಡಿ ಮಾಡಿದ್ದ ವಿಶ್ವನಾಥ್ ಗೆ ಇಂದು ಬೆಳಗ್ಗಿನಿಂದ ಸಿದ್ದು ಟ್ವೀಟ್ ಮಾಡಿ ತಮ್ಮ ಕೋಪ-ತಾಪ, ಬೇಸರ ವ್ಯಕ್ತಪಡಿಸ್ತಿದ್ದಾರೆ.

ಒಳ್ಳೆಯ ಕೆಲಸ‌ ಮಾಡಿದವರ ಬಗ್ಗೆ ವರ್ತಮಾನ ಕ್ರೂರವಾಗಿರುತ್ತೆ. ಇತಿಹಾಸ ಅದನ್ನು ಸ್ಮರಿಸುತ್ತದೆ. ದೇವರಾಜ ಅರಸು ಅವರ ಜನಪರ ಕೆಲಸಗಳನ್ನೂ ಮರೆತು ಜನ ಅವರನ್ನು ಸೋಲಿಸಿದರು. ಅವರನ್ನು ಗುರುಗಳೆಂದು ಈಗ ಹೇಳುತ್ತಿರುವ ನಾಯಕರು ಕೂಡಾ ಬಿಟ್ಟು ಓಡಿಹೋಗಿದ್ದರು. ಆದರೆ ಅರಸು ಅವರನ್ನು ಈಗ ಇತಿಹಾಸ ಸ್ಮರಿಸುತ್ತಿದೆ. ಈರ್ಷ್ಯೆಗೆ ಕಾಲವೇ ಉತ್ತರ. ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ ಮುಖ್ಯಮಂತ್ರಿ ಎಂಬ ಹೆಮ್ಮೆ ನನ್ನದು. ಇದನ್ನು ಪುಸ್ತಕ ಮಾಡಿ ಹಂಚಿದ್ದೇನೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸದಾ ಸಿದ್ದನಿದ್ದೇನೆ ಅಂತ ಟ್ವೀಟ್ ಮಾಡೋ ಮೂಲಕ ವಿಶ್ವನಾಥ್ ಟೀಕೆಗೆ ಸಿದ್ದು ತಿರುಗೇಟು ನೀಡಿದ್ದು, ಮೈಪರಚಿಕೊಳ್ಳುತ್ತಿರುವ ಕೈಲಾಗದವರ ಜತೆ ನನ್ನ ವಾದ ಇಲ್ಲ ಅಂತ ವಿಶ್ವನಾಥ್ ಗೆ ಪ್ರತ್ಯುತ್ತರ ನೀಡಿದ್ದಾರೆ.

ಮಂಡ್ಯದಲ್ಲಿ ನಿನ್ನೆಯಷ್ಟೇ ಸಿದ್ದರಾಮಯ್ಯ ಅರಸು ರೀತಿ ಆಡಳಿತ ನೀಡಿದ್ರಾ? 5 ವರ್ಷ ಪೂರೈಸಿದ ಸಿಎಂ ನಾನು ಅಂತ ಬೀಗುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಲೇವಡಿ ಮಾಡಿದ್ರು.



About The Author