Saturday, October 5, 2024

Latest Posts

ಪೂಜೆ ಮಾಡಿದ್ರೆ ಫಲಿತಾಂಶ ಬದಲಾಗಲ್ಲ- ಸಿಎಂ ಕುಟುಂಬಕ್ಕೆ ಸುಮಲತಾ ಪುತ್ರ ಟಾಂಗ್

- Advertisement -

ಮಂಡ್ಯ: ಮಾಜಿ ಸಚಿವ, ದಿವಂಗತ ಅಂಬರೀಶ್ ಪುತ್ರ, ನಟ ಅಭಿಷೇಕ್ ಅಂಬರೀಶ್ ಇಂದು ಮಂಡ್ಯಕ್ಕೆ ಆಗಮಿಸಿದ್ರು. ಈ ವೇಳೆ ಮಾತನಾಡಿದ ಅಭಿಷೇಕ್  ಸಿಎಂ ಎಚ್ಡಿಕೆ ಕುಟುಂಬಕ್ಕೆ ಟಾಂಗ್ ನೀಡಿದ್ದಾರೆ.

ಪ್ರೀತಿಯಿಂದ ಅಭಿಮಾನಿಗಳು ಕರೀತಾರೆ ಹಾಗಾಗಿ ಅವ್ರ ಕಾರ್ಯಕ್ರಮಗಳಿಗೆ ಬರುತ್ತೇನೆ.ಈ ತಿಂಗಳು ನಮ್ಮ ಕುಟುಂಬಕ್ಕೆ ವಿಷೇಶವಾದ ತಿಂಗಳಾಗಿದೆ. ಮೇ.23 ಅಮ್ಮನ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಮೇ.29 ಕ್ಕೆ ಅಪ್ಪನ ಹುಟ್ಟು ಹಬ್ಬ ಇದೆ. ಈ ತಿಂಗಳು ನನ್ನ ಸಿನಿಮಾ ಅಮರ್ ಬಿಡುಗಡೆಯಾಗಲಿದೆ. ಪ್ರೀತಿಯಿಂದ ಟೀ-ಕಾಫಿಗೆ ಕರೀತಾರೆ. ಪ್ರೀತಿಯಿಂದ ಕರಿತಾರೆ ಬರುತ್ತೇವೆ ಎಂದ್ರು.

ನಿಖಿಲ್ ಗೆ ಗುಡ್ ಲಕ್ ಹೇಳಿದ ಅಭಿಷೇಕ್

ರಾಜಕೀಯದಲ್ಲಿ ಜನರೇ ಹೀರೋ ಅಂತ ಹೇಳಿದ ಅಭಿಷೇಕ್, ಇತ್ತೀಚೆಗೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಸಿನಿಮಾ ಮಾಡ್ತೀನಿ, ಅದಕ್ಕೆ ನಾನೇ ಹೀರೋ ಅಂತ  ಹೇಳಿದ ಬಗ್ಗೆ ಪ್ರತಿಕ್ರಿಯಿಸಿದ್ರು, ಅದೇನೋ ಸಿನಿಮಾ ಮಾಡ್ತಾರೆ ಅಂತ ಕೇಳ್ಪಟ್ಟೆ. ಗುಡ್ ಲಕ್ ಅಂತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಗೆ ಟಾಂಗ್ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಕುಟುಂಬಕ್ಕೆ ಅಭಿಷೇಕ್ ಟಾಂಗ್

ಇನ್ನು ಮದ್ದೂರಿನಲ್ಲಿ ಸ್ಪರ್ಧೆ ಮಾಡಲ್ಲ ಅಂತ ಮಾಧ್ಯಮದವರ ಪ್ರಶ್ನೆಗೆ ಅಭಿಷೇಕ್ ಸ್ಪಷ್ಟನೆ ನೀಡಿದ್ರು. ಇನ್ನು ನನ್ನ ಸಿನಿಮಾಗಿಂತಲೂ ಮೇ23ರ ಫಲಿತಾಂಶದ ಬಗ್ಗೆ ಜಾಸ್ತಿ ಕುತೂಹಲ ಇದೆ. ನಮಗೆ ಮತದಾನದಂದೇ ಫಲಿತಾಂಶ ಗೊತ್ತಾಗಿದೆ. ಹಾಗಂತ ನಾವು ಯಾವುದೇ ಸರ್ವೆ ಮಾಡಿಸಿಲ್ಲ. ಫಲಿತಾಂಶದ ಬಗ್ಗೆ ನನಗೆ ಯಾವುದೇ ಟೆನ್ಷನ್ ಇಲ್ಲ. ಹಾಗೆಯೇ ಯಾವ ಸರ್ವೆ ಮಾಡಿಸಿದ್ರೂ, ಎಷ್ಟು ದೇವಾಲಯ ಸುತ್ತಿದ್ರೂ ಫಲಿತಾಂಶ ಬದಲಾಗೋದಿಲ್ಲ ಅಂತ ಪರೋಕ್ಷವಾಗಿ ಸಿಎಂ ಎಚ್ಡಿಕೆ ಕುಟುಂಬಕ್ಕೆ ಟಾಂಗ್ ನೀಡಿದ್ರು.

- Advertisement -

Latest Posts

Don't Miss