Sunday, January 19, 2025

Latest Posts

ಬೀದರ್ ಕೇಸ್ ಬಳಿಕ ಎಚ್ಚೆತ್ತ ಹು-ಧಾ ಪೊಲೀಸರು: ಎಟಿಎಂಗೆ ಹಣ ಹಾಕುವ ಸೆಕ್ಯೂರಿಟಿ ಏಜನ್ಸಿಗಳ ಜೊತೆ ಸಭೆ

- Advertisement -

Dharwad News: ಧಾರವಾಡ: ಎಟಿಎಂಗೆ ಹಣ ಹಾಕುವ ವಾಹನದ ಸಿಬ್ಬಂದಿಗಳ ಮೇಲೆ ಫೈರಿಂಗ್ ಆದ ಘಟನೆಗೆ ಸಂಬಂಧಿಸಿದಂತೆ, ಧಾರವಾಡದಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.

ಧಾರವಾಡದ ಎಲ್ಲ ಬ್ಯಾಂಕ್ ಮ್ಯಾನೇಜರ್ ಅಧಿಕಾರಿಗಳು, ಮತ್ತು ಸಿಬ್ಬಂದಿಗಳ ಜೊತೆ ಸಭೆ ನಡೆಸಿದ ಎಸಿಪಿ ಪ್ರಶಾಂತ ಸಭೆ ನಡೆಸಿದ್ದಾರೆ. ಇದರಲ್ಲಿ ಎಟಿಎಂಗಳಿಗೆ ಹಣ ಹಾಕುವ ಸೆಕ್ಯೂರಿಟಿ ಏಜನ್ಸಿಗಳು ಕೂಡ ಭಾಗಿಯಾಗಿತ್ತು.

ಪ್ರತಿದಿನ ಎಷ್ಟು ಹಣ ಹಾಕ್ತಿರಾ..? ಗನ್ ಮ್ಯಾನ್ ಗಳ ಕಡೆ ಬಂದೂಕು ಇದೆನಾ ಇಲ್ವಾ..? ಹಣ ಸಾಗಿಸುವ ವಾಹನಗಳಿಗೆ ಜಿಪಿಎಸ್ ಇದೆಯಾ ಇಲ್ಲವಾ, ಕಳ್ಳತನ ಪ್ರಕರಣಗಳಾದರೆ ಯಾರು ಹೊಣೆ..? ಎಂದೆಲ್ಲ ಪ್ರಶ್ನೆ ಕೇಳಿ, ಅದಕ್ಕೆ ಉತ್ತರ ಪಡೆದಿರುವ ಎಸಿಪಿ ಪ್ರಶಾಂತ್ ಸಿದ್ದನಗೌಡ, ಎಲ್ಲ ಎಟಿಎಂಗೆ ಹಣ ಹಾಕುವ ಏಜೆನ್ಸಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಹುಬ್ಬಳ್ಳಿ- ಧಾರವಾಡ ನಗರದಲ್ಲಿ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ.

- Advertisement -

Latest Posts

Don't Miss