Hubballi News: ಹುಬ್ಬಳ್ಳಿ: ಕರಸೇವಕ ಶ್ರೀಕಾಂತ ಪೂಜಾರ ಬಂಧನ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಬಿಜೆಪಿ ಹಿಂದೂ ಕಾರ್ಯಕರ್ತರು, ಟೌನ್ ಪೊಲೀಸ್ ಠಾಣೆ ಎದುರಿಗೆ ವಿಪಕ್ಷ ನಾಯಕ ಆರ್. ಅಶೋಕ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಅರೆಸ್ಟ್ ಮಾಡಿದ ಟೌನ್ ಇನ್ಸ್‌ಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರ್ ಅಮಾನತು ಮಾಡಲು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಕಡ್ಡಾಯ ರಜೆ ನೀಡಿದ್ದಾರೆ.
ಹೋರಾಟ ತೀವ್ರಗೊಂಡ ಹಿನ್ನಲೆ ಪೊಲೀಸ್ ಆಯುಕ್ತರಿಂದ ಕಡ್ಡಾಯ ರಜೆ…
ಶ್ರೀಕಾಂತ್ ಪೂಜಾರಿಯನ್ನು ಡಿಸೆಂಬರ್ 29 ರಂದು ಬಂಧಿಸಿದ್ದ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು. ಇನ್ಸಪೆಕ್ಟರ್ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ ಬಿಜೆಪಿ ನಾಯಕರು, ಹೋರಾಟ ತಣ್ಣಗಾಗುವರೆಗೆ ಇನ್ಸೆಕ್ಟರ್‌ಗೆ ಕಡ್ಡಾಯ ರಜೆ ನೀಡಿದ್ದಾರೆ ಎನ್ನಲಾಗಿದೆ.
‘ಇಂಥವರನ್ನು ಬಂಧಿಸದೇ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ’
ಮಹಿಳೆಗೆ ನೆರವು: ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ ಸಚಿವ ಸಂತೋಷ್ ಲಾಡ್