ಕೈ ಕೊಟ್ಟ ‌ಹಿಂಗಾರು,‌ಮುಂಗಾರು ಮಳೆ, ಆತ್ಮಹತ್ಯೆಗೆ ಶರಣಾದ ಅನ್ನದಾತ…

Hubballi News: ಹಿಂಗಾರು ಹಾಗೂ ಮುಂಗಾರು ‌ಕೈಕೊಟ್ಟಿದ್ದರಿಂದ ಅನ್ನದಾತರು ಕಂಗಾಲಾಗಿದ್ದು, ಆತ್ಮಹತ್ಯೆ ಹಾದಿ‌ ಹಿಡಿಯುತ್ತಿದ್ದಾರೆ. ಸಾಲದ ಬಾಧೆಯಿಂದ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಗೋಳ ತಾಲೂಕು ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ.

ಯಲ್ಲಪ್ಪ ಬಹದ್ದೂರಪ್ಪ ಪೂಜಾರ (68) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಕೆನರಾ ಬ್ಯಾಂಕಿನಲ್ಲಿ ಮೂರು ಲಕ್ಷ ಹಾಗೂ ಕೈಗಡ 2 ಲಕ್ಷ ಸಾಲ ಮಾಡಿಕೊಂಡಿದ್ದ. ಅದಲ್ಲದೆ ಟ್ರ್ಯಾಕ್ಟರ್ ಸಾಲ 4.50 ಲಕ್ಷ ಮಾಡಿಕೊಂಡಿದ್ದ. ಆದ್ರೆ ಹಿಂಗಾರು‌ ಮಳೆಯಾಗಲಿಲ್ಲ.‌ ಈಗ ಮುಂಗಾರು ಮಳೆಯೂ ಸಮಯಕ್ಕೆ ಸರಿಯಾಗಿ
ಬಾರದೆ ಬೆಳೆದ ಬೆಳೆಯಲ್ಲ ಹಾಳಾಗಿದ್ದು ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಕುಂದಗೋಳ ಪೊಲೀಸರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧ್ಯಾಪಕರ ವಿನಿಮಯ ಧಾರವಾಡದ IIT ಮತ್ತು ಜರ್ಮನ್ ಅಕಾಡೆಮಿಕ್ ಎಕ್ಸ್‌ಚೇಂಜ್ ಸರ್ವಿಸ್ ನಡುವೆ ಒಡಂಬಡಿಕೆ

ದೋಷಯುಕ್ತ ಇವಿ ವಾಹನ ಹೊಸ ಬೈಕ್‌ ನೀಡಲು ಟಿವಿಎಸ್‌ಗೆ ಗ್ರಾಹಕರ ಆಯೋಗ ಆದೇಶ

Market : ವರ್ಷವಾದರು ಹಂಚಿಕೆಯಾಗದ ಮಾರುಕಟ್ಟೆ ಮಳಿಗೆ : ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ವ್ಯಾಪಾರಿಗಳು

About The Author