Hubballi News : ಹೊಲಗೇರಿ ಪದ ಬಳಕೆ ಮಾಡಿದ ನಟ, ನಿರ್ದೇಶಕ ಉಪೇಂದ್ರ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ಪರಿಶಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು ನಗರದಲ್ಲಿ ವಿಶ್ವ ಬಹುಜನ ಸಮಾಜ ಧ್ವಜ ಮತ್ತು ಸಂವಿಧಾನ ರಕ್ಷಾ ಸೇನಾ ಸಂಘ ಸಹ ಆಕ್ರೋಶ ವ್ಯಕ್ತಪಡಿಸಿತು.
ನಟ ಉಪೇಂದ್ರ ವಿರುದ್ದ ದಲಿತರಿಗೆ ಅವಮಾನ ಮಾಡಿದ್ದಾರೆ. ಉಪೇಂದ್ರ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡಿದ ಅವರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಾ, ಊರು ಎಂದ ಮೇಲೆ ಹೊಲಗೇರಿ ಇರುತ್ತದೆ ಎಂಬ ಹೇಳಿಕೆ ನೀಡಿದ್ದ ನಟ ಉಪೇಂದ್ರ ಇಂತಹ ಹೇಳಿಕೆ ದಲಿತ ಸಮಾಜದ ಜಾತಿ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದು ಆದ್ದರಿಂದ ಉಪೇಂದ್ರ ವಿರುದ್ಧ ದೌರ್ಜನ್ಯ ಕಾಯ್ದೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಆಗಬೇಕು ಯೋಗ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು .
ಮುಖಂಡ ಸದಾನಂದ ತೇರದಾಳ ಮಾತನಾಡಿ, ನಟ ರಾಜಕಾರಣಿಗೆ ಗೌರವ ತರುವಂತದಲ್ಲ ಅವರ ಮಾತು ಸಾಕಷ್ಟು ಜನರ ಮೇಲೆ ಪ್ರಭಾವ ಬೀರುತ್ತದೆ. ಕೂಡಲೇ ಉಪೇಂದ್ರ ಅವರ ಮೇಲೆ ಕಾನೂನು ಕ್ರಮ ಆಗಲಿ ಒಂದು ಉನ್ನತ ಸ್ಥಾನದಲ್ಲಿ ಇದ್ದವರು ಈ ರೀತಿಯ ವರ್ತನೆ ಶೋಭೆ ತರುವಂತಹದಲ್ಲಿ ನಟ ಉಪೇಂದ್ರ ಅವರು ರಾಜ್ಯಮಟ್ಟದ ರಾಜಕೀಯ ಪಕ್ಷ ಸಂಘಟನೆ ಮಾಡಿದ್ದಾರೆ ಖ್ಯಾತ ನಟರಾಗಿದ್ದಾರೆ ಇಂತಹ ಸ್ಥಾನ ಮಾನ ಹೊಂದಿದ್ದಾರೆ ಪರಿಶಿಷ್ಟ ಜಾತಿ ದೌರ್ಜನ್ಯ ಕಾನೂನು ಅಡಿ ಕ್ರಮ ಆಗಲಿ ಎಂದರು.ಇದೇ ಸಂದರ್ಭದಲ್ಲಿ ವಿಶ್ವ ಬಹುಜನ ಸಮಾಜ ಧ್ವಜ ಮತ್ತು ಸಂವಿಧಾನ ರಕ್ಷಾ ಸೇನಾ ಸಂಘದ ಮಹಿಳಾ ಘಟಕದ ಮುಖಂಡೆ ಲಕ್ಷ್ಮೀ ರಾಮಚಂದ್ರ ಹುಟಗಿ ಕಿಡಿ ಕಾರಿದ್ದು ಇದೊಂದು ಹೇಳಿಕೆ ಸರಿಯಾದ ಕ್ರಮವಲ್ಲ ಉಪೇಂದ್ರ ಅವರು ದೊಡ್ಡ ನಟರು ಹೇಳಿಕೆ ಅಥವಾ ಚರ್ಚೆ ಮಾಡುವಾಗ ಎಚ್ಚರಿಕೆಯಿಂದ ಹೇಳಿಕೆ ಕೊಡಬೇಕು ಎಂದರು.
ಹುಬ್ಬಳ್ಳಿ ಸೈಬರ್ ಕ್ರೈಮ್ ಪ್ರಕರಣ: ಮೂವರು ವಿದ್ಯಾರ್ಥಿಗಳು ಅರೆಸ್ಟ್..