Bus Drivers; ಚಿಗರಿ ಬಸ್ಸಿನ ಚಾಲಕನ ಚಳಿ ಬಿಡಿಸಿದ ಬೈಕ್ ಸವಾರ..!

ಹುಬ್ಬಳ್ಳಿ: ಚಿಗರಿ ಬಸ್ಸಿನ ಚಾಲನೆಗೆ ಬೇಸತ್ತು ಬೈಕ್ ಸವಾರನೊಬ್ಬ ರಸ್ತೆ ಮಧ್ಯದಲ್ಲಿಯೇ ಬಸ್ಸನ್ನು ಸೈಡ್ ಹಾಕಿಸಿ ಡ್ರೈವರ್ ನನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದೆ.

ಹೌದು .ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವೆ ತ್ವರಿತ ಸಾರಿಗೆ ಸೇವೆ ನೀಡಲು ಮುಂದಾಗಿರುವ ಚಿಗರಿ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಲೇ ಇದೆ. ಬೈಕ್ ಸವಾರರಿಗೆ ತಲೆ ನೋವಾಗಿರುವ ಚಿಗರಿ ಡ್ರೈವರ್ ನ್ನು ತರಾಟೆಗೆ ತೆಗೆದುಕೊಂಡ ಬೈಕ್ ಸವಾರ ಮೈಚಳಿ ಬಿಡಿಸಿದ್ದಾನೆ.

ಇನ್ನೂ ಜನನಿಬಿಡ ಪ್ರದೇಶದಲ್ಲಿ ಕೂಡ ವೇಗವಾಗಿ ಬಸ್ ಚಾಲನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದರೂ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Police: ಹಾಡುಹಗಲೇ ಯುವಕನ ಬರ್ಬರ ಹತ್ಯೆ: ಕಾರಣ ನಿಗೂಢ !

Fake Gold: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ 25 ಲಕ್ಷ ವಂಚಿನೆ; ಆರೋಪಿಗಳ ಬಂಧನ..!

ಹುಚ್ಚವನಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ..!

About The Author