Friday, April 18, 2025

Latest Posts

Bus titcket rate- ಸದ್ದುಗದ್ದಲವಿಲ್ಲದೆ ಬಸ್ ದರ ಏರಿಕೆ

- Advertisement -

ಹುಬ್ಬಳ್ಳಿ: ರಾಜ್ಯಾದ್ಯಂತ ಶಕ್ತಿ ಯೋಜನೆಯಲ್ಲಿ ಮಹಿಳೆಯರು ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿ ಖುಷಿಯಾಗಿದ್ದಾರೆ.ಆದ್ರೆ ಇನ್ನೊಂದು ಕಡೆ ಸದ್ದುಗದ್ದಲವಿಲ್ಲದೆ ಬಸ್ ದರ ಏರಿಕೆಯಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.                           

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನವಲಗುಂದ ಘಟಕದಲ್ಲಿ ಮೊದಲಿನ ದರಕ್ಕಿಂತ ಒಂದು ಪಟ್ಟು ಬಸ್ ಪ್ರಯಾಣ ದರ  ದರ ಏರಿಕೆ ಮಾಡಲಾಗಿದೆ.ನವಲಗುಂದ-ಯಮನೂರ ಮಾರ್ಗದಲ್ಲಿ  ಸಂಚರಿಸುವ ಬಸ್ ಪ್ರಯಾಣದ ದರ ಏರಿಕೆಯಾಗಿದೆ.ಇದರಿಂದಾಗಿ ಸಾರಿಗೆ ಸಂಸ್ಥೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವಲಗುಂದ-ಯಮನೂರ ಮಾರ್ಗ 5 ಕಿಮೀ ವ್ಯಾಪ್ತಿ ಇದೆ.ಇಲ್ಲಿಯವರೆಗೂ 5 ರೂಪಾಯಿ ದರವಿದ್ದ ಬಸ್ ದರ ಇದಕ್ಕಿಂದ್ದಂತೆ 10 ರೂಗೆ ಏರಿಕೆಯಾಗಿದೆ.ಇದನ್ನು ನಿರ್ವಾಹಕರಿಗೆ ಕೇಳಿದರೆ ಇದನ್ನು ಮೇಲಾಧಿಕಾರಿಗಳನ್ನು ಕೇಳಿ ಎಂಬ ಉತ್ತರ ಸಿದ್ಧವಾಗಿದೆ. ಇದನ್ನು ಅಧಿಕಾರಿಗಳು ಗಮನಿಸುತ್ತಿಲ್ಲ.

ಹಿರಿಯ ನಾಗರಿಕರಿಗೆ ಇದರಲ್ಲಿ 2 ರೂ ರಿಯಾಯತಿ ನೀಡಲಾಗಿದೆ.ಇದರಿಂದ ಕೇವಲ 05ಕಿಮೀ ಪ್ರಯಾಣಕ್ಕೆ ಹೆಚ್ಚು ಹಣ ನೀಡಿ ಸಂಚಾರ ಮಾಡಬೇಕಾಗಿದೆ.ಕೂಡಲೇ ಮೊದಲಿನಂತೆ ಐದು ರೂಪಾಯಿ ದರ ನಿಗಧಿ ಮಾಡಬೇಕೆಂದು ಯಮನೂರು ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.

Fact check:ಮೋದಿಜಿ ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳವ ಅಗತ್ಯವಿದೆ -ಮೋದಿ

ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ

- Advertisement -

Latest Posts

Don't Miss