National News: ನ್ಯೂಯಾರ್ಕ್: ಇಂದಿನ ಕಾಲದಲ್ಲಿ ಮಕ್ಕಳು ಹುಟ್ಟೋದೇ ಪುಣ್ಯ ಅನ್ನೋ ಜನರಿದ್ದಾರೆ. ಅಂಥಹುದರಲ್ಲಿ ಇಲ್ಲೊಬ್ಬ ಪುಣ್ಯಾತ್ಗಿತ್ತಿ, ತನ್ನ ಒಂದೂವರೆ ವರ್ಷದ ಮಗಳನ್ನ ಮನೆಯಲ್ಲೇ ಬಿಟ್ಟು, 10 ದಿನ ಟ್ರಿಪ್‌ಗೆ ಹೋಗಿದ್ದಾಳೆ. ಈ ದುಷ್ಟ ತಾಯಿಯ ಶೋಕಿಗೆ, ಮಗುವಿನ ಪ್ರಾಣವೇ ಹೋಗಿದೆ. ಸದ್ಯ ಈ ತಾಯಿ ಪೊಲೀಸರ ಅತಿಥಿಯಾಗಿದ್ದಾಳೆ.
ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಕ್ರಿಸ್ಟಲ್ ಕ್ಯಾಂಡೆಲಾರಿಯೋ(31) ಎಂಬ ಹೆಂಗಸನ್ನ ಪೊಲೀಸರು ಬಂಧಿಸಿದ್ದು, ಜೈಲಿನ್(16 ತಿಂಗಳು) ಮೃತ ಮಗುವಾಗಿದೆ. ಈಕೆ ತನ್ನ ಹೆಣ್ಣು ಮಗುವನ್ನ ಮನೆಯಲ್ಲೇ ಬಿಟ್ಟು ಪ್ರವಾಸಕ್ಕೆ ಹೋಗಲು ನಿರ್ಧರಿಸಿದ್ದಳು. ಕೆಲ ದಿನಗಳ ಹಿಂದೆ ಅಕ್ಕಪಕ್ಕದ ಮನೆಯವರಿಗೆ, ನಾನು 10 ದಿನ ಟ್ರಿಪ್‌ಗೆ ಹೋಗುತ್ತಿದ್ದೇನೆ. ನನ್ನ ಮಗುವನ್ನ ಸ್ವಲ್ಪ ನೋಡಿಕೊಳ್ಳಿ ಎಂದು ಹೇಳಿದ್ದಾಳೆ.
ಆದರೆ ಹೋಗುವ ಮುನ್ನ ಯಾರಿಗೂ ಹೇಳದೇ, ಮಗುವನ್ನ ಮನೆಯಲ್ಲೇ ಬಿಟ್ಟು, ನಿರ್ಲಕ್ಷ್ಯದಿಂದ 10 ದಿನದ ಪ್ರವಾಸಕ್ಕೆ ತೆರಳಿದ್ದಾಳೆ. ಆಕೆ 10 ದಿನ ಹೋಗುತ್ತಿದ್ದಾಳೆ ಎಂದ ಮೇಲೆ ಮಗುವನ್ನ ಕರೆದೊಯ್ದಿರುತ್ತಾಳೆ ಎಂದು ತಿಳಿದು, ಅಕ್ಕಪಕ್ಕದ ಮನೆಯವರು ನಿರ್ಲಕ್ಷ್ಯ ಮಾಡಿದ್ದಾರೆ. ಆ ಮಗು ಊಟ ತಿಂಡಿ ಇಲ್ಲದೇ, ಹಸಿವಿನಿಂದ ನರಳಿ ನರಳಿ ಸತ್ತಿದ್ದಾಳೆ.
ಪ್ರವಾಸ ಮುಗಿಸಿ ಬಂದ ತಾಯಿ ಮನೆಯಲ್ಲಿ ನೋಡಿದಾಗ, ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಬೆಡ್ ಮೇಲೆ ಮಲ ಮೂತ್ರ ವಿಸರ್ಜನೆ ಮಾಡಿ, ಅದರ ಮೇಲೆ ನರಳಾಡಿ ಮಗು ಪ್ರಾಣ ಬಿಟ್ಟಿದೆ. ತಕ್ಷಣ ಆ ತಾಯಿಯೇ ಮಗುವನ್ನು ಬದುಕಿಸುವಂತೆ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರು ಬಂದು ಕಂಡಾಗ ಮಗು ಸಾವನ್ನಪ್ಪಿದ್ದಾಳೆ. ವಿಷಯ ತಿಳಿದ ಪೊಲೀಸರು ತಾಯಿಯನ್ನು ಅರೆಸ್ಟ್ ಮಾಡಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡ ವಿಮಾನ ನಿಲ್ದಾಣ ಅಂತ ಹೆಸರಿಟ್ಟವರು ನಾವು
‘ವಿದೇಶಗಳಲ್ಲಿ ಇಂತಹ ಟ್ರೈನ್ ನೋಡುತ್ತಿದ್ದೆವು. ವಿಮಾನದಲ್ಲಿ ಹೋದ ಅನುಭವ ಆಗುತ್ತೆ’