Tuesday, April 29, 2025

Latest Posts

Hubli Case: ಕುರುಬ ಸಮುದಾಯದಂತೆ ಅಂತ್ಯಸಂಸ್ಕಾರ: ಪಂಚಭೂತಗಳಲ್ಲಿ ಲೀನಳಾದ ಬಾಲಕಿ

- Advertisement -

Hubli News: ಹುಬ್ಬಳ್ಳಿಯಲ್ಲಿ 5 ವರ್ಷದ ಅಂಗವಿಕಲ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿಯ ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಬಳಿಕ ಘಟನಾ ಸ್ಥಳದಲ್ಲಿ ಮಹಜರು ನಡೆಸಿದ್ದು, ಬಾಲಕಿಯ ತಂದೆ ಸೇರಿ ಐವರು ಪಂಚರ ಸಾಕ್ಷಿಯೊಂದಿಗೆ ಪೊಲೀಸರು ಮಹಜರು ಕಾರ್ಯ ನಡೆಸಿದ್ದಾರೆ. ಬಳಿಕ ಮನೆಗೆ ಕರೆತಂದು ಕೆಲ ನಿಮಿಷಗಳ ಕಾಲ ಬಾಲಕಿಯ ಮೃತದೇಹವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಬಳಿಕ ಮನೆಯ ಹೊರಗಡೆ ಕುಟುಂಬಸ್ಥರು ಪೂಜೆ ನೆರವೇರಿಸಿದರು. ನಂತರ ನಗರದ ದೇವಾಂಗಪೇಟೆ ರುದ್ರಭೂಮಿಯಲ್ಲಿ ಕುರುಬ ಸಮಾಜದ ವಿಧಿ ವಿಧಾನಗಳಂತೆ, ಬಾಲಕಿಯ ಅಂತ್ಯ ಸಂಸ್ಕಾರ ನಡೆದಿದೆ.

ನ್ಯಾಯವಾಗಿ ದುಡಿದು ತಿನ್ನುತ್ತಾರೆ ಅವರು. ಅವರಿಗೆ ಇಂತ ಅನ್ಯಾಯವಾಗಿದೆ. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಹುಟ್ಟಬಾರದು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಬಾಲಕಿ ಮನೆ ಎದುರು ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕಣ್ಣೀರು ಹಾಕಿರುವ ಬಾಲಕಿಯ ತಾಯಿ, ನಾನು ನನ್ನ ಮಗಳನ್ನು ಹೇಗೆ ಮರೆಯಲಿ..? ಹೆಣ್ಣು ಮಕ್ಕಳೇ ಹುಟ್ಟಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ವೇಳೆ ಶ್ರೀರಾಮಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಹುಬ್ಬಳ್ಳಿ ಯಲ್ಲಿ ಬಾಲಕಿಯನ್ನ ರಾಕ್ಷಸಿಯವಾಗಿ ಹತ್ಯೆ ಮಾಡಿದ್ದು ನಾಗರಿಕ ಸಮಾಜಕ್ಕೆ ಆಘಾತವಾಗಿದೆ. ಸಮಾಜದ ಆಕ್ರೊಶದ ಕಟ್ಟೆ ಒಡೆದಿತ್ತು. ಜನರು ಎನ್ ಕೌಂಟರ್ ಆಗಬೇಕು ಎಂದು ಒತ್ತಡ ಇತ್ತು. ನೇಹಾ ಹಿರೇಮಠ ಕೊಲೆ ಕೇಸ್ ನಲ್ಲಿ ಎನ್ ಕೌಂಟರ್ ಮಾಡಿದ್ರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಇಂತಹ ಪುಂಡರ ಸಂತತಿ ಕೊನೆಯಾಗಬೇಕು. ಜೀವಂತ ಇರಲಿಕ್ಕೆ ಇವರು ಅರ್ಹರಲ್ಲ. ಕೋರ್ಟಗಳು ಗಂಭಿರವಾಗಿ ಪರಿಗಣಿಸಬೇಕು. ನೇಹಾ ಹಿರೇಮಠ ಆರೋಪಿಗೂ ಇದೆ ಶಿಕ್ಷೆ ಆಗಬೇಕು. ಬಾಲಕಿಯರಯನ್ನ ಕೊಲೆ ಮಾಡಿದವರನ್ನ ಎನ್ ಕೌಂಟರ್ ಮಾಡಬೇಕು ಎಂದು ಕುಲಕರ್ಣಿ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಸಮಾಜ ಸೇವಕ ಅದಾತ್ಯ ದಾಂಡೇಲಿ ಎಂಬುವವರು, ಬಾಲಕಿಯ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡಿದ್ದಾರೆ.

- Advertisement -

Latest Posts

Don't Miss