Friday, April 11, 2025

Latest Posts

Chabbi Ganesha: ಕೆಂಪು ಬಣ್ಣದ ಛಬ್ಬಿ ಗಣೇಶ ಭಕ್ತರ ಇಷ್ಟಾರ್ಥ ಸಿದ್ದಿ. ಇತಿಹಾಸ .!

- Advertisement -

ಹುಬ್ಬಳ್ಳಿ:ಹುಬ್ಬಳ್ಳಿ ಯ ಅತ್ಯಂತ ಸಣ್ಣ ಗ್ರಾಮ ಛಬ್ಬಿಯಲ್ಲಿ ವರ್ಷಕ್ಕೊಮ್ಮೆ ಪ್ರತಿಷ್ಠಾಪನೆಯಾಗುವ ಗಣೇಶನನ್ನು ನೋಡಲು ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಕಿಲೋಮೀಟರ್ ಗಟ್ಟಲೆ ನಿಂತು ದರ್ಶನ ಪಡೆಯುತ್ತಾರೆ. ದೇಶದಲ್ಲಿ ಸಾಕಷ್ಟು ಗಣೇಶನನ್ನು ಕೂರಿಸುತ್ತಾರೆ ಆದರೆ ಇಲ್ಲಿಗೆ ಬಂದು ಯಾಕೆ ದರ್ಶನ ಪಡೆಯುತ್ತಾರೆ ಅಂತೀರಾ ?ಹಾಗಿದ್ರೆ ಈ ಗಣೇಶನ ಮಹಿಮೆ ಬಗ್ಗೆ ನೀವೊಮ್ಮೆ ತಿಳಿಯಲೆಬೇಕು.

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟೀಷರ ವಿರುದ್ದ ಹೋರಾಡಲು ಎಲ್ಲಾ ವರ್ಗದ ಜನರನ್ನು ಒಂದೆಡೆ ಸೇರಿಸಲು ಬಾಲಗಂಗಾಧರ ತಿಲಕರು ಗಣೇಶ ಹಬ್ಬವನ್ನು ಹುಟ್ಟುಹಾಕಿದರಂತೆ. ಆದರೆ ಇದಕ್ಕೂ ಮೊದಲೇ ಛಬ್ಬಿಯಲ್ಲಿ 75 ವರ್ಷಗಳ ಹಿಂದೆ ಗಣೇಶ ಆಚರಣೆ ಆರಂಭವಾಗಿತ್ತಂತೆ ಅದರಲ್ಲೂ ಇಲ್ಲಿರುವ ಗಣೇಶನನ್ನು ನೋಡುವುದೇ ಒಂದು ಭಾಗ್ಯವಂತೆ ಯಾಕೆ ಅಂತೀರಾ ಹಾಗಿದ್ರೆ ಇತಿಹಾಸ ನೋಡುವುದಾದರೆ.

ಛಬ್ಬಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹತ್ತಾರು ತಲೆಮಾರುಗಳಿಂದ ಗೌಡಿಕೆ ಮತ್ತು ಕುಲಕರ್ಣಿಕೆ ಹಕ್ಕುಗಳು ನಡೆಸಿಕೊಂಡು ಬಂದ ಮನೆತನಗಳಿವೆ. ಅದರಂತೆ ಶಾನುಭೋಗ ಮನೆತನವೂ ಪುರಾತನದಿಂದಲೂ ಸಾದು ಸಂತರ ಸೇವೆಗೆ ಹಾಗೂ ಧರ್ಮ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದವು. ಆದರೆ ಇಷ್ಟೆಲ್ಲ ಧರ್ಮಕಾರ್ಯಗಳನ್ನು ಮಾಡಿದ್ದರು ಆ ಕುಟುಂಬಕ್ಕೆ ಸಂತಾನ ಭಾಗ್ಯ ಮಾತ್ರ ಇರಲಿಲ್ಲ. ಸಂತಾನ ಭಾಗ್ಯಕ್ಕಾಗಿ ಅವರು ತಿರುಗದ ದೇವರುಗಳಿಲ್ಲ ಕಟ್ಟದ ಹರಕೆಗಳಿಲ್ಲ ಹೀಗಿರುವಾಗ ಒಮ್ಮೆ ಗ್ರಾಮಕ್ಕೆ ಶ್ರೀ ದತ್ತಾತ್ರೆಯ ಕೃಷ್ಣೇಂದ್ರ ಸ್ವಾಮಿಗಳು ಹಾಗು ಶತಾವಧಾನಿ ಶ್ರೀ ಚಿದಂಬರ ಸ್ವಾಮಿಗಳು ಆಗಮಿಸಿ ಕುಲಕರ್ಣಿಗೆ ಸಂತಾನಕ್ಕಾಗಿ ನೀವು  ಮನೆಯಲ್ಲಿ ರಕ್ತ ವರ್ಣದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡಿ, ಆಗ ನಿಮ್ಮ ಇಷ್ಟಾರ್ಥ ಸಿದ್ದಿಯಾಗುತ್ತದೆ, ಎಂದು ಹೇಳಿದರಂತೆ. ಗುರುಗಳ ಸಲಹೆಯಂತೆ ರಕ್ತ ವರ್ಣದ ಗಣೇಶನನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡತೊಡಗಿದರಂತೆ ಅದರ ಫಲವಾಗಿ ಕೆಲವೇ ವರ್ಷಗಳಲ್ಲಿ ಆ ಕುಲಕರ್ಣಿ ಮನೆತನಕ್ಕೆ ಸಂತಾನ ಪ್ರಾಪ್ತಿಯಾಯಿತೆಂಬ ಮಾತಿದೆ.

1827 ರಲ್ಲಿ ಒಂದು ಮನೆತನದಿಂದ ಶುರುವಾದ ಈ ಕೆಂಪು ಗಣೇಶ ಪೂಜೆ ತಲತಲಾಂತರಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಂದು ಅದೇ ಮನೆತನದ ಐದನೆ ತಲೆಮಾರಾದ ತಮ್ಮಪ್ಪನ ಕುಟುಂಬ ಈ ಅಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.

ಹುಬ್ಬಳ್ಳಿ ಛಬ್ಬಿ ಎನ್ನುವ ಪುಟ್ಟ ಗ್ರಾಮದಲ್ಲಿ ಪ್ರತಿವರ್ಷ ಪ್ರತಿಷ್ಠಾಪಿಸುವ ಈ ಗಣೇಶನನ್ನು ನೋಡಲು ಜನಸಾಗರವೇ ಹರಿದು ಬರುತ್ತಿದ್ದು ಸುಮಾರು ಕಿಲೋ ಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕೆಂಪು ಗಣೇಶನ ದರ್ಶನ ಪಡೆಯುತ್ತಾರೆ. ಇನ್ನು ಇಲ್ಲಿ ಸೇರುವ ಭಕ್ತ ಸಮೂಹವನ್ನು ನಿಯಂತ್ರಣ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗುತ್ತದೆ.

Congress : ಕಾಂಗ್ರೆಸ್​ನಲ್ಲಿ ಜಾತಿ ಜನಗಣತಿ ಗದ್ದಲ..!

Hubli Ganesha: ಗಣೇಶ ವಿಸರ್ಜನೆ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ ಅಂಜುಮನ್ ಸಮಿತಿ..!

Cauvery Protest: ಕಾವೇರಿ ಹೋರಾಟಕ್ಕೆ ದನಿಗೂಡಿಸಿದ ಸ್ಯಾಂಡಲ್​ವುಡ್

- Advertisement -

Latest Posts

Don't Miss