Thursday, July 25, 2024

Latest Posts

Police: ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಬಲಿ  ಕಾನ್ಸ್ಟೇಬಲ್ ಧಾರುಣ ಸಾವು

- Advertisement -

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ಕಿಲ್ಲರ್ ಬೈಪಾಸ್ ನಲ್ಲಿ ಮತ್ತೆ ಅಪಘಾತವಾಗಿದ್ದು ಈ ಘಟನೆಯಲ್ಲಿ  ಪೊಲೀಸ್ ಕಾನ್ಸ್ಟೇಬಲ್ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹುಚ್ಚೇಶ್ ಹಿರೇಗೌಡರ 37 ಎಂಬುವವರೇ ಅಪಘಾತದಲ್ಲಿ ಸಾವಿಗೀಡಾದವರು. ಲಕ್ಷ್ಮಿ ಎಂಬ ಇನ್ನೋರ್ವ ಮಹಿಳಾ ಕಾನ್ಸ್ಟೇಬಲ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಇಬ್ಬರನ್ನು ಚಬ್ಬಿ ಗಣೇಶೋತ್ಸವದ ಸಲುವಾಗಿ ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ  ಇಟ್ಟಿಗಟ್ಟಿ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಹುಚ್ಚೇಶ ಅವರ ಮೃತ ದೇಹ ರಸ್ತೆಯುವುದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಕ್ಷ್ಮಿ ಅವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Hubli Ganesha ಹುಬ್ಬಳ್ಳಿ (ಈದ್ಗಾ) ಗಣಪತಿ ವಿಸರ್ಜನೆ ಹಿನ್ನೆಲೆ ವಾಹನ ಮಾರ್ಗ ಬದಲಾವಣೆ..!

KIMS Hospital: ಆಸ್ಪತ್ರೆಯಲ್ಲಿ ಮಕ್ಕಳನ್ನು ಅದಲು ಬದಲು ಮಾಡಿದ ಸಿಬ್ಬಂದಿಗಳು..!

India : ಕೆನಡಾ ವರ್ಸಸ್ ಭಾರತ ಗುದ್ದಾಟ..!

- Advertisement -

Latest Posts

Don't Miss