Hubballi crime News: ಹುಬ್ಬಳ್ಳಿ: ಅದು ಪೊಲೀಸರಿಗೆ ಸವಾಲಾಗಿದ್ದ ಸೈಬರ್ ಕ್ರೈಮ್ ಪ್ರಕರಣ. ಎಲ್ಲೋ ಕೂತು ಇನ್ ಸ್ಟಾದಲ್ಲಿ ಆಟ ಆಡ್ತಿದ್ದ ಕ್ರೀಮಿಗಳು ಅಂದರ್ ಆಗಿದ್ದಾರೆ. ಎಲ್ಲೋ ಕೂತು ಕಾಲೇಜ್ ವಿದ್ಯಾರ್ಥಿನಿಯರ ಹೆಸರು ಹಾಳು ಮಾಡಿದ್ದ ಕಿಡಗೇಡಿಗಳು ಅಂದರ್ ಆಗಿದ್ದಾರೆ. ಇನ್ ಸ್ಟಾ ವಿದ್ಯಾರ್ಥಿನಿಯ ಪೋಟೋ ಎಡಿಟ್ ಮಾಡಿ ಹಾಕ್ತಿದ್ದ ಸೈಬರ್ ಕಿರಾತಕರ ಗ್ಯಾಂಗ್ ಕೊನೆಗೂ ಅಂದರ್ ಆಗಿದೆ. ಅಕಸ್ಮಾತ್ ಪೊಲೀಸರು ಸ್ವಲ್ಪ ಮೈಮರೆತರೂ ಚೋಟಾ ಮುಂಬೈನಲ್ಲಿ ದೊಡ್ಡ ಅನಾಹುತ ಆಗೋ ಸಾಧ್ಯತೆ ಇತ್ತು. ಇದೀಗ ಹುಬ್ಬಳ್ಳಿ ಪೊಲೀಸರು ಇನ್ ಸ್ಟಾ ದಲ್ಲಿ ಅಶ್ಲೀಲ ಪೊಟೋ ಹಾಕ್ತಿದ್ದ ಮೂಲ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ..
ಬಂಧಿತ ಆರೋಪಿಗಳ ಹೆಸರು ರಜನಿಕಾಂತ,ನವೀನ್ ,ಕಿರಣ್. ಮೂವರು ಸಮರ್ಥ ಕಾಲೇಜ್ ವಿದ್ಯಾರ್ಥಿಗಳು. ಹುಬ್ಬಳ್ಳಿಯ ಸಮರ್ಥ ಖಾಸಗಿ ಕಾಲೇಜ್ ನಲ್ಲಿ ವಿದ್ಯಾರ್ಥಿನಿಯ ಹೆಸರಲ್ಲಿ ನಕಲಿ ಇನ್‌ಸ್ಟ್ರಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಹಾಗೂ ಪೊಲೀಸ್‌ರಿಗೆ ಬೆದರಿಕೆ ಹಾಕಿದ ಪ್ರಕರಣ ತಿರುವು ಸಿಕ್ಕಿದೆ. ಮೂಲ ಆರೋಪಿಗಳಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಕೇವಲ ಏಳು ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗಳಹಳ್ಳಿ ಗ್ರಾಮದ ಜಾಲತಾಣಗಳ ಖಾತೆ ಹ್ಯಾಕ್ ಮಾಡುತ್ತಿದ್ದ ಕಿರಣ ಚವನಗೌಡರ ಹಾಗೂ ಅವರ ಸ್ನೇಹಿತ ನವೀನ್ ಅಕ್ಕಿ ಬಂಧಿತರು. ಪ್ರಕರಣ ದಾಖಲಾಗಿ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಶಂಕಿತ ಆರೋಪಿಯಾದ ರಜನಿಕಾಂತ ತಳವಾರ ಎಂಬುವವರನ್ನು ಸಂಶಯದ ಮೇಲೆ ಬಂಧಿಸಿ ಏಳು ದಿನ ವಿಚಾರಣೆ ಒಳಪಡಿಸಿದ್ದರು. ಅಷ್ಟೇ ಅಲ್ಲದೆ ಈ ಪ್ರಕರಣದ ಹಿಂದೆ ಇನ್ನೂ ಕೆಲವರ ಇದ್ದಾರೆ ಎಂಬ ಸಂಶಯದಿಂದ ತನಿಖೆ ಮುಂದುವರಿಸಿದ್ದರು. ಜಾಲತಾಣದ ಅಕೃತ ಮಾಹಿತಿ ಹಿಂದೆ ಬಿದ್ದಾಗ ರಜನಿಕಾಂತ ಆರೋಪಿ ಎಲ್ಲ ಎಂಬವುದು ಪೊಲೀಸರಿಗೆ ಸ್ಪಷ್ಟವಾಗಿದೆ.
ಶಂಕಿತ ಆರೋಪಿಯಾಗಿದ್ದ ರಜನಿಕಾಂತನ ಇನ್‌ಸ್ಟ್ರಾಗ್ರಾಂ ಖಾತೆ, ಇ-ಮೇಲ್ ಐಡಿ ಹಾಗೂ ಸಾಮಾಜಿಕ ಜಾಲತಾಣದ ವಿವರಗಳನ್ನು ಪೊಲೀಸರು ಸಂಗ್ರಹಿಸಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ಈ ವರದಿ ಬರುವರೆಗೂ ಉಳಿದ ಆರೋಪಿಗಳ ಪತ್ತೆ ಪೊಲೀಸರಿಗೆ ಕಷ್ಟವಾಗಿತ್ತು. ಆದರೆ, ಪ್ರಕರಣ ಗಂಭೀರವಾಗಿದ್ದರಿಂದ ಸೈಬರ್ ಠಾಣಾ ಪೊಲೀಸರು ಹ್ಯಾಕ್ ಮಾಡಲಾದ ವಿದ್ಯಾರ್ಥಿನಿಯರ ಇನ್‌ಸ್ಟ್ರಾಗ್ರಾಂ ಖಾತೆ ವಿವರ ಸಂಗ್ರಹಿಸಿ ಫೇಸ್‌ಬುಕ್ ಸಂಸ್ಥೆಗೆ ಮಾಹಿತಿ ನೀಡಲು ಪತ್ರ ಬರೆದಿದ್ದರು.ಇನ್ನು A1 ಕಿರಣ್ ಡಾರ್ಕ್ ವೆಬ್ ಮೂಲಕ ಇನ್ ಸ್ಟಾ ಹ್ಯಾಕ್ ಮಾಡಿ ಹುಡಗೀರ ಪೋಟೋ ಎಡಿಟ್ ಮಾಡ್ತಿದ್ದನಂತೆ..
ನವೀನ್ ಅಕ್ಕಿ ಎಂಬಾತ ಈ ವಿದ್ಯಾರ್ಥಿನಿಯರ ಓದುತ್ತಿರುವ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿನಿ ಇನ್ನೊಬ್ಬ ವಿದ್ಯಾರ್ಥಿಯ ಜೊತೆ ಸಲುಗೆಯಿಂದ ಇದ್ದಳು. ಅದನ್ನು ಸಹಿಸದ ನವೀನ್, ತಮ್ಮ ಊರಿನ ಮತ್ತೊಂದು ಕಾಲೇಜಿನಲ್ಲಿ ಓದುತ್ತಿದ್ದ ಕಿರಣ ಚವನಗೌಡ ಸಹಾಯ ಪಡೆದು, ಆ ವಿದ್ಯಾರ್ಥಿನಿಯ ಇನ್‌ಸ್ಟ್ರಾಗ್ರಾಂ ಖಾತೆ ಹ್ಯಾಕ್ ಮಾಡಿಸಿದ್ದಾನೆ. ಬಳಿಕ ವಿದ್ಯಾರ್ಥಿನಿಯ ಫೋಟೊಗಳನ್ನು ಅಶ್ಲೀಲಗೊಳಿಸಿ ಅದೇ ಖಾತೆಯಲ್ಲಿ ಪೋಸ್ಟ್ ಮಾಡಿಸುತ್ತಾನೆ. ನಂತರ ಪೋಸ್ಟ್ ಅಳಿಸುವುದಾಗಿ ಹೇಳಿ ಅವಳ ಜೊತೆ ಸಲುಗೆ ಬೆಳೆಸಿ, ಕಿರಣನಿಗೆ ಪೋಸ್ಟ್ ಅಳಿಸಲು ಹೇಳುತ್ತಾನೆ.
ಅದರಿಂದ ಕೋಪಗೊಂಡ ಕಿರಣ, ನವೀನ್ ಜೊತೆ ಜಗಳ ಮಾಡುತ್ತಾನೆ. ತನ್ನ ಹೆಸರು ಎಲ್ಲಿಯೂ ಬರಬಾರದು ಎಂದು ದಿಕ್ಕು ತಪ್ಪಿಸಲು ಪೊಲೀಸ್ ಬಗ್ಗೆ ಅವಹೇಳನ ಪದ ಬಳಿಸಿ ಪೋಸ್ಟ್ ಮಾಡಿದ್ದಾನೆ. ಇನ್ನು ಈ ಪ್ರಕರಣ ಮುಂಬೈಗೂ ಲಿಂಕ್ ಇದೆ. ಮುಂಬೈನ ಸೈಬರ್ ಠಾಣೆಯಲ್ಲಿ ಇಂತಹದ್ದೇ ಇನ್ನೊಂದು ಪ್ರಕರಣ ದಾಖಲಾಗಿತ್ತು. ಆಗ ಅಲ್ಲಿಯ ಪೊಲೀಸರು ಪೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು ಮಾಹಿತಿ ಸಹ ಪಡೆದಿದ್ದರು. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರು ಇದೇ ಮಾರ್ಗ ಅನುಸರಿಸಿದ್ದು, ಕಡಿಮೆ ಅವಯಲ್ಲಿ ಆರೋಪಿಗಳ ಬಂಧಿಸಲು ಸಹಕಾರಿಯಾಗಿದೆ..
ಒಟ್ಟಿನಲ್ಲಿ ಪೊಲೀಸರಿಗೆ ತಲೆನೋವಾದ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ.ಅಕಸ್ಮಾತ್ ಪೊಲೀಸರು ಸ್ವಲ್ಪ ಯಾಮಾರಿದ್ರು ಹುಬ್ಬಳ್ಳಿಯಲ್ಲಿ ದೊಡ್ಡ ಗಲಾಟೆ ಆಗೋ ಸಾಧ್ಯತೆ ಇತ್ತು.ಏನೋ ಮಾಡೋಕೆ ಹೋಗಿ ಇದೀಗ ಸ್ನೇಹಿತರೆಲ್ಲ ಕಂಬಿ ಹಿಂದೆ ಹೋಗಿದ್ದಾರೆ.ವಯಸ್ಸು ಸಣ್ಣದಿದ್ರೂ ಅವರ ಮಾಡಿದ ಕೆಲಸ ಮಾತ್ರ ಖತರ್ನಾಕ..ಎಲ್ಲೋ ಕೂತು ಅಟ ಆಡ್ತಿದ್ದ ಕ್ರಿಮಿಗಳು ಇದೀಗ ಕಂಬಿ ಎಣಿಸುತ್ತಿದ್ದಾರೆ..
ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ.
Rules : ಮಣಿಪಾಲದಲ್ಲಿ ವಾರಾಂತ್ಯ ಪಬ್, ಕ್ಲಬ್ ಗಳಿಗೆ ಕಟ್ಟುನಿಟ್ಟಿನ ಕ್ರಮ ಜಾರಿ
Cow : ಕೆಸರಿನಲ್ಲಿ ಹೂತುಹೋಗಿದ್ದ ಹಸುವನ್ನು ರಕ್ಷಿಸಿದ ಬೈಕ್ ಸವಾರರು..!