Saturday, July 27, 2024

Latest Posts

ಹುಬ್ಬಳ್ಳಿ ಇಬ್ಬರೂ ಹಂತಕರ ಪರ ವಕಾಲತ್ತಿಗೆ ಸಿಕ್ಕಿಲ್ಲ ವಕೀಲರು : ದಿಟ್ಟ ನಿರ್ಧಾರ ತೊಟ್ಟ ಹುಬ್ಬಳ್ಳಿ ಧಾರವಾಡ ಲಾಯರ್ಸ್

- Advertisement -

Hubli News: ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯ ಜನರ ನಿದ್ದೆಗೆಡಿಸಿದ್ದ ಇಬ್ಬರೂ ಹಂತಕರಿಗೆ ಈಗ ಜೈಲೇ ಗತಿ. ಇಬ್ಬರು ಕೊಲೆಪಾತಕರ ಪರವಾಗಿ ವಕಾಲತ್ತು ಮಾಡಲು ವಕೀಲರೇ ಸಿಗುತ್ತಿಲ್ಲ. ನೇಹಾ ಮತ್ತು ಅಂಜಲಿ ಹಂತಕರಿಗೆ ಜೈಲೇ ಗತಿ ಎಂಬುವಂತಾಗಿದೆ.

ಹೌದು.. ವಕೀಲರು ಕೂಡ ಇಂತಹ ಘನಘೋರ ಕೊಲೆಗಳನ್ನು ವಿರೋಧಿಸಿದ್ದು, ಹಂತಕರ ಪರವಾಗಿ ವಕಾಲತ್ತು ಹಾಕಲ್ಲ ಎಂದು ನಿರ್ಧಾರ ಮಾಡಿದ ಬೆನ್ನಲ್ಲೇ ನೇಹಾ ಹಂತಕ ಫಯಾಜ್ ಹಾಗೂ ಅಂಜಲಿ ಹಂತಕ ಗಿರೀಶ್ ವಿಶ್ವನಿಗೂ ವಕೀಲರು ಸಿಕ್ಕಿಲ್ಲ.

ಫಯಾಜ್ ಪರ ವಕಾಲತ್ತು ವಹಿಸದಿರುವಂತೆ ನಿರ್ಣಯ ಕೈಗೊಂಡಿದ್ದ ವಕೀಲರು, ಗಿರೀಶ್ ಪರ ವಕಾಲತ್ತು ವಹಿಸಲು ಕೂಡ ಬಹುತೇಕ ವಕೀಲರು ಹಿಂದೇಟು ಹಾಕಿದ್ದಾರೆ. ಹೀಗಾಗಿ ಇಬ್ಬರಿಗೂ ಸದ್ಯಕ್ಕೆ ಜಾಮೀನು ಅರ್ಜಿಯ ಪ್ರಶ್ನೆಯೇ ಇಲ್ಲದಂತಾಗಿದೆ.

ಫಯಾಜ್ ಪರ ವಕಾಲತ್ತು ವಹಿಸದಿರುವಂತೆ ನಿರ್ಣಯ ಕೈಗೊಂಡಿದ್ದ ವಕೀಲರು, ಗಿರೀಶ್ ಪರ ವಕಾಲತ್ತು ವಹಿಸಲು ಕೂಡ ಬಹುತೇಕ ವಕೀಲರು ಹಿಂದೇಟು ಹಾಕಿದ್ದಾರೆ. ಹೀಗಾಗಿ ಇಬ್ಬರಿಗೂ ಸದ್ಯಕ್ಕೆ ಜಾಮೀನು ಅರ್ಜಿಯ ಪ್ರಶ್ನೆಯೇ ಇಲ್ಲದಂತಾಗಿದೆ.

ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಫಯಾಜ್, ಸಿಐಡಿ ಕಸ್ಟಡಿಯಲ್ಲಿರೋ ಅಂಜಲಿ ಹಂತಕ ಗಿರೀಶ್. ಇನ್ನೂ ಹಲವು ತಿಂಗಳುಗಳ ಕಾಲ ಜೈಲಲ್ಲೇ ಇರೋ ಸ್ಥಿತಿ ನಿರ್ಮಾಣವಾಗಿದೆ. ಇಬ್ಬರೂ ಕೊಲೆಗಡಕರು ಕಂಬಿ ಎಣಿಸುವುದು ಅನಿವಾರ್ಯವಾಗಿದೆ. ವಕೀಲರ ನಡೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು,ಹುಬ್ಬಳ್ಳಿ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಎರಡೂ ಕೊಲೆ ಪ್ರಕರಣದಲ್ಲಿ ವಕೀಲರು ಮಹತ್ವದ ಪಾತ್ರ ವಹಿಸಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ, ತಾಲೂಕು,ಜಿಲ್ಲಾ,ಬಿಬಿಎಂಪಿ ಚುನಾವಣೆ ನಡೆಸಲಾಗುವುದು: ಸಿಎಂ

ಆರ್‌ಸಿಬಿಯನ್ನು ಅಣಕಿಸಿದ್ದಕ್ಕೆ ನಟಿಗೆ ಖಡಕ್ ರಿಪ್ಲೈ ಕೊಟ್ಟ ಫ್ಯಾನ್ಸ್..

ಮೈಸೂರಿನ ಮೈಲಾರಿ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತ ಕಾಲೇಜ್ ಡೇಸ್ ಮೆಲುಕು ಹಾಕಿದ ಸಿಎಂ

- Advertisement -

Latest Posts

Don't Miss