Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಓರ್ವ ವ್ಯಕ್ತಿ ಬೈಕ್ ಓಡಿಸುತ್ತ, ಟ್ರಕ್ ಕೆಳಗೆ ನುಗ್ಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಬ್ಬಳ್ಳಿಯ ಬೈಪಾಸ್ ರಸ್ತೆಯ ದಾರಾವತಿ ಹನಮಮಪ್ಪನ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಸಿದ್ಧಪ್ಪ ಕೆಂಚಣ್ಣವರ(42) ಮೃತ ದುರ್ದೈವಿಯಾಾಗಿದ್ದಾರೆ.
ಸಿದ್ಧಪ್ಪ ಉಣಕಲ್ ದುರ್ಗಮ್ಮನ ಓಣಿ ನಿವಾಸಿಯಾಾಗಿದ್ದು, ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾರೆ. ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಮಹೇಶ್ ಚಿಕ್ಕವೀರಮಠ ಎಂಬಾತ ಬಡ್ಡಿಗಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಮಹೇಶ್ ಚಿಕ್ಕವೀರಮಠ ಗೆ ತಕ್ಕ ಶಿಕ್ಷೆ ನೀಡಬೇಕೆಂದು ಡೆತ್ ನೋಟ್‌ನಲ್ಲಿ ಒತ್ತಾಯಿಸಲಾಗಿದೆ. ಅಲ್ಲದೇ, ತಾನು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡ ಕಾರಣಕ್ಕೆ, ಪೋಷಕರಲ್ಲಿ, ಕುಟುಂಬಸ್ಥರಲ್ಲಿ ಸಿದ್ದಪ್ಪ ಕ್ಷಮೆ ಕೇಳಿದ್ದಾರೆ.
ಆಗಿದ್ದೇನು..?
ಸಿದ್ದಪ್ಪ ಮಹೇಶ್ ಎಂಬಾತನಿಂದ 10 ಲಕ್ಷ ಸಾಲ ಪಡೆದಿದ್ದ. ಆದರೆ ಈ ವಿಚಾರವನ್ನು ಮನೆಯಲ್ಲಿ ಹೇಳಿರಲಿಲ್ಲ. ಆದರೆ ತೆಗೆದುಕೊಂಡ 10 ಲಕ್ಷ ಸಾಲದ ಬದಲಾಗಿ ಬಡ್ಡಿ ಎಲ್ಲ ಸೇರಿಸಿ 65 ಲಕ್ಷ ರೂಪಾಯಿ ಕೊಟ್ಟಿದ್ದಾನೆಂದು ಡೆತ್ ನೋಟ್‌ನಲ್ಲಿ ಹೇಳಿದ್ದಾನೆ. ಆದರೆ ಅದರ ಹೊರತಾಗಿಯೂ ಮತ್ತೂ ಬಡ್ಡಿ ಹಣ ಬಾಕಿ ಉಂಟು ಎಂದು ಮಹೇಶ್ ಪೀಡಿಸುತ್ತಿದ್ದನೆಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ. ಅಲ್ಲದೇ ಈ ಕಾರಣಕ್ಕಾಗಿಯೇ ತಾನು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಮಹೇಶ್‌ಗೆ ಶಿಕ್ಷೆ ನೀಡಬೇಕು ಎಂದು ಬರೆಯಲಾಗಿದೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.