Hubli News: ಹುಬ್ಬಳ್ಳಿಯಲ್ಲಿ ಸೈಟ್ ವಿಚಾರಕ್ಕೆ ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಹಾಗೂ ಮನೆಗೆ ನುಗ್ಗಿ ಆಸ್ತಿ ಪತ್ರ ಕಳವು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಫ್ಐಆರ್ ದಾಖಲಾದರೂ ಕ್ರಮ ಕೈಗೊಂಡಿಲ್ಲ ಎಂದು ದೂರುದಾರ ಮಹಮದ್ ಗೌಸ್ ಆರೋಪಿಸಿದ್ದಾರೆ.
ಸೈಟ್ ವಿಚಾರಕ್ಕೆ ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ ಆರೋಪ..!
ಪ್ರಕಾಶ್ ಹಸರೆಡ್ಡಿ ಮತ್ತು ಮಿಥುನ್ ಜಾದವ್ ವಿರುದ್ಧ ಮಹಮದ್ ಗೌಸ್ ಗಂಭೀರ ಆರೋಪ ಮಾಡಿದ್ದಾರೆ. ಮನೆಗೆ ನುಗ್ಗಿ ಆಸ್ತಿ ಪತ್ರಗಳನ್ನು ಕಳವು ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಆಗಸ್ಟ್ 21ರಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾಗಿದೆ. ಆದರೆ, ಈವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೌಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಗೆ ನ್ಯಾಯ ದೊರಕಿಸಿಕೊಡುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ದೂರು ನೀಡುವುದಾಗಿ ತಿಳಿಸಿದ್ದಾರೆ.
ಗನ್ ತೋರಿಸಿ ಬೆದರಿಕೆ ಹಾಗೂ ಆಸ್ತಿ ಪತ್ರಗಳ ಕಳವು ಆರೋಪದ ಬಗ್ಗೆ ಪೊಲೀಸರ ಮುಂದಿನ ಕ್ರಮದತ್ತ ಈಗ ಗಮನ ನೆಟ್ಟಿದೆ.




