Hubli News: ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮೋಹನ ಭಾಗವತ್ ಅವರ 75ಕ್ಕೆ ವರ್ಷ ನಿವೃತ್ತಿ ಆಗಬೇಕು ಎಂಬ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯಾವುದೋ ಜನರಲ್ ನಲ್ಲಿ ಮಾತನಾಡಿದ್ದು ಲಿಂಕ್ ಮಾಡ್ತಾ ಇದ್ದಾರೆ. ಅದರ ಬಗ್ಗೆ ಈಗಾಗಲೇ ಹೇಳಿದ್ದೇನೆ, ಮತ್ತೆ ಹೇಳಲ್ಲ ಎಂದು ಜೋಶಿ ಹೇಳಿದ್ದಾರೆ.
ಇಡಿ ದಾಳಿ ಬಗ್ಗೆ ಕಾಶಪ್ಪನವರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ಇಡಿ ಲಿಸ್ಟ್ ನಲ್ಲಿ ಬರುವ ಹಾಗೆ ಅವರೇನಾದ್ರೂ ಮಾಡಿದ್ದಾರಾ..? ಯಾರಾದ್ರೂ ಗದ್ದಲ ಮಾಡಿದವರಷ್ಟೇ ಬರ್ತಾರೆ. 55 ಜನ ಅನ್ನೋದು ಡೈವರ್ಟ್ ಮಾಡೋಕೆ ಅಷ್ಟೇ. ಸಿಎಂ, ಡಿಸಿಎಂ ಅವರೇ ಪರಸ್ಪರ ವ್ಯಾಪಾರ ಮಾಡೋಕೆ ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲ ಇಲ್ಲಾ ಅಂದಿದ್ದಾರೆ. ಇಬ್ಬರು ತಮ್ಮ ಬಳಿ ಇದ್ದಂತ ದುಡ್ಡಿನ ಪವರ್ ತೋರಿಸ್ತಾ ಇದ್ದಾರೆ. ಕೊಳ್ಳುವವರಿಬ್ಬರೂ ಬಲಾಢ್ಯರಿದ್ದಾರೆ. ಅವರೇ ಒಬ್ಬರೋಗೊಬ್ಬರು ಕಾದಾಟ ನಡೆಸಿದ್ದಾರೆ. ವ್ಯಾಪಾರ ಆಗಲು ಕುದುರೆಗಳು ತಯಾರಿವೆ. ಆ ವ್ಯಾಪಾರದಲ್ಲಿ ಬಿಜೆಪಿ ಬಿಳೋದಿಲ್ಲ ಎಂದು ಜೋಶಿ ಹೇಳಿದ್ದಾರೆ.
2019ರಲ್ಲಿ ನಾವು ಮಾಡಿದ್ದು ನಮ್ಮಲ್ಲಿ ಜಾಸ್ತಿ ಇತ್ತು, ಮಾಡಿದ್ವಿ. ಆಡಳಿತ ಸರಿಯಾಗಿ ಮಾಡಬೇಕು. ಕಾಂಗ್ರೆಸ್ ಹೈಕಮಾಂಡ್ ಕಂಟ್ರೋಲ್ ತಪ್ಪುತ್ತೆ. ಹೆಚ್ಚು ಶಾಸಕರನ್ನ ತೋರಿಸಿದವರು ಸಿಎಂ ಆಗಬಹುದು ಅನ್ನೋದಕ್ಕೆ ಮಾಡ್ತಾ ಇದ್ದಾರೆ. ನಾವು ಅದರಲ್ಲಿ ಬಿದ್ದಿಲ್ಲ, ಸುಳ್ಳು ಆರೋಪ ಮಾಡ್ತಾ ಇದ್ದಾರೆ. ಅವರ ನ್ಯೂನ್ಯತೆಗಳನ್ನ ಎತ್ತಿ ಹಿಡಿದು ಹೋರಾಟ ನಡೆಸಲು ನಾನು ಸೂಚನೆ ನೀಡಿದ್ದೇನೆ. ರಾಜ್ಯದ ಹಲವೆಡೆಯಿಂದ ಜನ ಬರ್ತಾರೆ, ರಸ್ತೆ ಸಮಸ್ಯೆಯನ್ನೇ ಹೇಳ್ತಾರೆ. ಭ್ರಷ್ಟಾಚಾರ ಪರಾಕಾಷ್ಟ ನಡೆದಿದೆ, ರೈತರು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರೆ ಎಂದು ಜೋಶಿ ಕಿಡಿಕಾರಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆಗಲು ಮಾಠಾಧೀಷರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ಅವರ ಹೇಳಿಕೆ ಬಗ್ಗೆ ನಾನು ಮಾತನಾಡಲ್ಲ. ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ, ದೊಂಬರಾಟ ನಿಲ್ಲಿಸಬೇಕು. ಶಾಸಕರು ತಾವೇ ಪ್ರಭುಗಳಂತೆ ಮಾಡ್ತಾ ಇದ್ದಾರೆ. ವರ್ಗಾವಣೆಯಲ್ಲಿ ಹರಾಜು ಮಾಡಲಾಗ್ತಿದೆ. ಭಯೋತ್ಪಾದಕರಿಗೆ, ಭ್ರಷ್ಟರಿಗೆ ಸ್ವರ್ಗದಂತಾಗಿದೆ ಎಂದು ಜೋಶಿ ಹೇಳಿದ್ದಾರೆ.
ಬಿಜೆಪಿಯಲ್ಲಿ ಬಣಗಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ರಾಜ್ಯ ಸರ್ಕಾರ ದಿವಾಳಿ ಎದ್ದಿದೆ. ಪಾರ್ಟಿಯೊಳಗಿನ ದೂರು ದುಮ್ಮಾನ ಇದ್ರೆ ಅವರನ್ನು ಕರೆದು ಮಾತನಾಡಿದ್ದೇವೆ. ಪಕ್ಷದ ಶಿಸ್ತನ್ನು ಮೀರಿ ನಡೆಯೋರ ವಿರುದ್ಧ ಕ್ರಮ ಕೈಗ“ಳ್ಳಲಾಗುತ್ತದೆ ಎಂದು ಜೋಶಿ ಹೇಳಿದ್ದಾರೆ.
ಕುನ್ಹಾ ವರದಿ ವಿಚಾರದ ಬಗ್ಗೆ ಜೋಶಿ ಮಾತನಾಡಿದ್ದು, ತಮಗೆ ಬೇಕಾದವರನ್ನೇ ನ್ಯಾಯಾಧೀಶರನ್ನು ಮಾಡೋದು ಸರಿಯಲ್ಲಾ. ವರದಿಯನ್ನು ಸಂಪೂರ್ಣ ವಾಗಿ ನೋಡೋವರಗೆ ಮಾತನಾಡಲ್ಲಾ. ಆದ್ರೆ ಪೊಲೀಸರ ಮೇಲೆ ಹೊಣೆಗಾರಿಕೆ ಹಾಕೋದು ಸರಿಯಲ್ಲಾ ಎಂದಿದ್ದಾರೆ.