Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಮಾತನಾಡಿದ್ದು, ಬಿಜೆಪಿ ಜನಾಕ್ರೋಶ ಕಾಂಗ್ರೆಸ್ ಜನಾಕ್ರೋಶ ಸಿದ್ಧತೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ಇಂತದ್ರಲ್ಲಿ ಮಾಸ್ಟರ್. ಇಂತಹದರ ಬಗ್ಗೆ ಅವರಿಗೆ ನಾವೇನು ಹೇಳಿಕೊಡಬೇಕಾಗಿಲ್ಲ. ಕಾಂಗ್ರೆಸ್ ನವರಿಗೆ ಮಾಡಲು ಏನು ಕೆಲಸ ಇದೆ. ಕಾಂಗ್ರೆಸ್ ನವರತ್ರ ದುಡ್ಡಿಲ್ಲ ದುಕಾನ್ ಬಂದ್ ಆಗಿದೆ. ಬಂದ್ ಆಗಿರುವಂತ ದುಕಾನ್ ಯಾವ ರೀತಿ ಹೇಳಿಕೊಳ್ಳಕಾಗುತ್ತೆ. ಗೊತ್ತು ಗುರಿ ಇಲ್ಲದೆ ಕೆಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಎರಡು ವರ್ಷದಲ್ಲೇ ಜನಾ ಬೀದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಒಂದು ಸಣ್ಣ ನೋವನ್ನ ಕೂಡ ಹಂಚಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರು, ಜಾನುವಾರ, ರೋಗ, ರೈತರ ಬಗ್ಗೆ ಕಾಳಜಿ ಬಿಟ್ಟು ಜನರನ್ನ ಡೈವರ್ಟ್ ಮಾಡುತ್ತಿದ್ದಾರೆ. ಅವರದೇ ಆದ ಮೈಂಡ್ ಅನ್ನು ಇಟ್ಟುಕೊಂಡು ಜನರನ್ನ ದೈವರ್ಟ್ ಮಾಡ್ತಾರೆ. ಮುಖ್ಯಮಂತ್ರಿಗಳ ಕಾರ್ಯವೈಖರಿಯ ನಿಷ್ಕ್ರಿಯತೆಗೆ ಒಂದು ಉದಾಹರಣೆ ಇದು ಎಂದು ವಿ.ಸೋಮಣ್ಣ ಹೇಳಿದ್ದಾರೆ.
ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯರಿಂದ ಜಾತಿ ಜನಗಣತಿ ದಾಳ ಎಂದು ಸೋಮಣ್ಣ ಆರೋಪಿಸಿದ್ದಾರೆ. ಸಚಿವ ಸಂಪುಟದಲ್ಲಿ ಜಾತಿ ಜನಗಣತಿ ವರದಿ ಮಂಡಿಸುತ್ತಿರುವುದಕ್ಕೆ ಕಿಡಿಕಾರಿರುವ ಸಚಿವರು, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಅಂತ ಅನ್ನಿಸ್ತಾನೇ ಇಲ್ಲ. ಜಾತಿ ಜನಗಣತಿ ವಿಚಾರದಲ್ಲಿ ಅವರಲ್ಲಿಯೇ ಒಗ್ಗಟ್ಟಿಲ್ಲ. ಸಾಧಕ ಬಾಧಕಗಳು ಏನಾಗುತ್ತೆ ಅನ್ನೋದರ ಅರಿವಿಲ್ಲ. ಜನರನ್ನು ಬೇರೆ ಡೈವರ್ಟ್ ಮಾಡಲು ಜಾತಿ ಜನಗಣತಿ ವರದಿ ಮುಂದೆ ತಂದಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿಎಂ ಇನ್ನೊಂದು ದಾಳ ಪ್ರಯೋಗಿಸಿದ್ದಾರೆ. ಆ ಮೂಲಕ ರಾಜ್ಯದ ಜನತೆಯ ಮೇಲೆ ಗದಾ ಪ್ರಹಾರ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ನಡೆ ಖಂಡನೀಯ ಎಂದು ಸೋಮಣ್ಣ ಹೇಳಿದ್ದಾರೆ.
ಗುತ್ತಿಗೆದಾರರು ನಮ್ಮ ಸರ್ಕಾರವನ್ನ ತೆಗೆದರು, ಈಗ ಅವರನ್ನು ತಗಿತಾರೆ. ಆದರೆ ಒಂದಂತೂ ಸತ್ಯ ಇಂತಹ ಸರ್ಕಾರ ಇರಬಾರದು. ಸಿದ್ದರಾಮಯ್ಯನವರು ಈ ರೀತಿಯ ಹೆಜ್ಜೆ ಹಾಕ್ತಾರೆ ಅಂತ ಕನಸಿನಲ್ಲೂ ಕಂಡಿರಲಿಲ್ಲ. ಹಳೆಯ ಸಿದ್ದರಾಮಯ್ಯ ಇಲ್ಲ ಅಂತ ಪದೇ ಪದೇ ನಾನು ಹೇಳುತ್ತೇನೆ. ಈಗಿನ ಸಿದ್ದರಾಮಯ್ಯ ಯಾರು ಅಂತ ನನಗೆ ಗೊತ್ತಿಲ್ಲ ಅನ್ನೋ ಮಟ್ಟಿಗೆ ಬಂದಿದೆ ಎಂದು ಸೋಮಣ್ಣ ಹೇಳಿದ್ದಾರೆ.
ಪರ್ಸೆಂಟೇಜ್ ವಿಚಾರದಲ್ಲಿ ಗುತ್ತಿಗೆದಾರರ ಆರೋಪದ ಬಗ್ಗೆ ಮಾತನಾಡಿರುವ ಸೋಮಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಒಂದು ದೊಡ್ಡ ಸಂದೇಶವನ್ನು ಕೊಟ್ಟು ಹೋಗಿದ್ದಾರೆ. ಅವರ ಭಾವನೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಅನ್ನು ಕೂಡ ಗಣನೆಗೆ ತೆಗೆದುಕೊಂಡು ಗೊಂದಲ ಸೃಷ್ಟಿ ಮಾಡಿಕೊಳ್ಳೋದು ಸರಿಯಲ್ಲ. ಯಥಾ ರಾಜ ತಥಾ ಪ್ರಜಾ, ಏನು ಇಲ್ಲದೆ ಗಾಳಿ ಆಡೋದಿಲ್ಲ. ನಮ್ಮಲ್ಲೇನೋ ಇದೆ ಅಂತ ಕಾಂಗ್ರೆಸ್ ನವರು ಬಹಳಷ್ಟು ಮಾತನಾಡಿದರು. ಈಗ ಅವರು ಅರ್ಥ ಮಾಡಿಕೊಳ್ಳಬೇಕು. ಅವರ ಸರ್ಕಾರದಲ್ಲಿರುವಂತಹ ಸಲಹೆಗಾರರೇ ಇದು ನಂಬರ್ ಒನ್ ಭ್ರಷ್ಟಾಚಾರ ಸರ್ಕಾರ ಅಂತಾರೆ. ಸಿದ್ದರಾಮಯ್ಯ ಅವರ ಜೊತೆ ಶಾಸಕನಾಗಿ ಮಂತ್ರಿಯಾಗಿ ಕೂಡ ನಾನು ಕೆಲಸ ಮಾಡಿದ್ದೇನೆ ಎಂದು ಸೋಮಣ್ಣ ಹೇಳಿದ್ದಾರೆ.