Hubli News: ಹುಬ್ಬಳ್ಳಿ: ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಮಾಲಾಧಾರಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ ಐದಕ್ಕೇರಿದೆ.
ಧಾರವಾಡ ತಾಲೂಕಿನ ಸತ್ತೂರ ಗ್ರಾಮದ ಶಂಕರ ಚವ್ಹಾಣ ಉರ್ಫ್ ಊರ್ಬಿ ಎಂಬ 29 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾನೆ. ಕಳೆದ 13 ವರ್ಷದಿಂದ ಕಿಮ್ಸನಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಂಕರ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಯಾಗಿದ್ದ.
ಮೂಲತಃ ಧಾರವಾಡ ಬಳಿಯ ಸತ್ತೂರ ನಿವಾಸಿಯಾಗಿದ್ದ ಶಂಕರ ಉಣಕಲ್ ಗ್ರಾಮದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದ.ಇದೇ ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿ ವೃತ ಕೈಕೊಂಡಿದ್ದ ಶಂಕರ ಬಾಳಲ್ಲಿ ವಿಧಿಯಾಟ ಅಯ್ಯಪ್ಪನ ದರ್ಶನ ಪಡೆಯಲು ಬಿಡಲಿಲ್ಲಾ..
ಘಟನೆಯಲ್ಲಿ ಈಗಾಗಲೇ ನಿಜಲಿಂಗಪ್ಪ ಬೇಪುರಿ ( 58 ವರ್ಷ)86%, ಸಂಜಯ್ ಸವದತ್ತಿ ( 20 ವರ್ಷ)80%, ರಾಜು ಮೂಗೇರಿ (21 ವರ್ಷ)74%, ಲಿಂಗರಾಜು ಬೀರನೂರ (24 ವರ್ಷ)86% ಸಾವಿಗೀಡಾಗಿದ್ದರು. ಇಂದು ಶಂಕರ್ ಚವ್ಹಾಣ್ (ಊರ್ಬಿ) (29 ವರ್ಷ) 99% ಮೃತರಾದರು.