Friday, July 11, 2025

Latest Posts

Hubli News: ಮಹಿಳಾ ಗ್ರಾಹಕರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಡೆಲಿವರಿ ಬಾಯ್ ಅರೆಸ್ಟ್

- Advertisement -

Hubli News: ಹುಬ್ಬಳ್ಳಿ: ಆನ್​ಲೈನ್​ನಲ್ಲಿ ಆರ್ಡರ್​ ​ಮಾಡುವ ಮಹಿಳಾ ಗ್ರಾಹಕರ ಮೊಬೈಲ್ ನಂಬರ್​ಗಳನ್ನು ಸೇವ್​ ಮಾಡಿಕೊಂಡು, ಅವರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಡೆಲೇವರಿ ಬಾಯ್​ನನ್ನು ಹುಬ್ಬಳ್ಳಿಯ ಗೋಕುಲ್​ ರೋಡ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಮೇಶ್ ರೆಡ್ಡಿ ಬಂಧಿತ ಆರೋಪಿ. ರಮೇಶ್​ ರೆಡ್ಡಿ ಆಗಾಗ ಕೆಲ ಕೋರಿಯರ್ ಕಂಪನಿಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದನು. ಕೋರಿಯರ್ ಕಂಪನಿಗಳು ಕೂಡಾ ತಮ್ಮ ಸಿಬ್ಬಂದಿ ರಜೆ ಇದ್ದಾಗ, ಈತನನ್ನು ಕೋರಿಯರ್ ಡೆಲೇವರಿ ಮಾಡಲು ಕಳುಹಿಸುತ್ತಿದ್ದರಂತೆ. ಆದರೆ, ಈತ ಕಂಪನಿಗಳು ಹೇಳಿದಷ್ಟು ಕೆಲಸ ಮಾಡದೆ ನೀಚ ಕೃತ್ಯ ಎಸಗಿದ್ದಾನೆ.

ಆರೋಪಿ ರಮೇಶ್ ರೆಡ್ಡಿ ಮಹಿಳಾ ಗ್ರಾಹಕರ ಮೊಬೈಲ್​ ನಂಬರ್​ಗಳನ್ನು ಸೇವ್​ ಮಾಡಿಕೊಂಡು, ಬಳಿಕ ಅವರಿಗೆ ಹಾಯ್ ಬೇಬಿ, ಐ ವಾಂಟ್ ಟು ಮೀಟ್ ಯು, ಐ ಲವ್ ಯು ಸೇರಿದಂತೆ ಅನೇಕ ಅಶ್ಲೀಲ ಮೆಸೆಜ್​ಗಳನ್ನು ಕಳುಹಿಸುತ್ತಿದ್ದನಂತೆ. ಆರೋಪಿ ರಮೇಶ್ ರೆಡ್ಡಿ ಕಾಟವನ್ನು ತಾಳಲಾರದೆ, ಅನೇಕರು ಈತನ ನಂಬರ್​ ಬ್ಲಾಕ್ ಮಾಡಿದ್ದಾರೆ. ಇನ್ನೂ ಕೆಲವರು ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ.

ಆದರೆ, ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಡಾವಣೆಯೊಂದರಲ್ಲಿ ವಾಸವಾಗಿರುವ ಇಬ್ಬರು ಮಹಿಳೆಯರು ಈತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಈತನ ಕಾಟ ವಿಪರೀತವಾದಾಗ ಈ ಇಬ್ಬರು ಮಹಿಳೆಯರು ಗೋಕುಲ್​ ರೋಡ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ರಮೇಶ್ ರೆಡ್ಡಿಯನ್ನು ಪತ್ತೆ ಮಾಡಿ ಬಂಧಿಸಿ ಜೈಲಿಗಟ್ಟಿದ್ದಾರೆ.

- Advertisement -

Latest Posts

Don't Miss