Hubli News: ಹುಬ್ಬಳ್ಳಿ: ವಿಜಯಪುರದ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಹುಬ್ಬಳ್ಳಿಯ ಲಿಂಕ್ ಇದೆ ಎಂದು ತಿಳಿದು ಬಂದಿದ್ದು, ಕಳ್ಳತನ ಮಾಡಿದ್ದ ಆರೋಪಿಯನ್ನು ಪೋಲೀಸರು ಹುಬ್ಬಳ್ಳಿಗೆ ಕರೆ ತಂದಿದ್ದಾರೆ.
ಈ ಖದೀಮರು ತಾವು ಕದ್ದ ಬಂಗಾರವನ್ನು ಶಾಲೆಯಲ್ಲಿ ಬಚ್ಚಿಟ್ಟಿದ್ದೇವೆಂದು ಹೇಳಿದ್ದಾರೆ. ಹಾಗಾಗಿ ವಿಜಯಪುರ ಪೋಲೀಸರು ಕಳ್ಳರ ವಿಚಾರಣೆಯನ್ನು ಹುಬ್ಬಳ್ಳಿಗೆ ಕರೆತಂದು ನಡೆಸುತ್ತಿದ್ದಾರೆ. ಈ ಕಳ್ಳತನದ ರೂವಾರಿ ಶೇಖರ್ ಎನ್ನುವವನನ್ನು ಹುಬ್ಬಳ್ಳಿಗೆ ಕರೆತಂದಿದ್ದು, ಹುಡುಕಾಟ ನಡೆಸಿದ್ದಾರೆ.
ಹುಬ್ಬಳ್ಳಿ ಇರುವ ಲಿಂಕ್ ಆದ್ರೂ ಏನು ಅಂತಾ ಹೇಳೋದಾದ್ರೆ, ಈ ಖದೀಮರು, ಕದ್ದ ಚಿನ್ನವನ್ನು ಕೇಶ್ವಾಪುರದಲ್ಲಿರುವ ಮನೆ ಮತ್ತು ಗದಗ ರಸ್ತೆಯಲ್ಲಿರುವ ಸೆಂಟ್ ಆಂಡ್ರ್ಯೂಸ್ ಶಾಲೆಯಲ್ಲಿಯೇ ಚಿನ್ನ ಕರಗಿಸಿದ್ದರು. ಏಕೆಂದರೆ, ಕಳ್ಳತನದ ರೂವಾರಿ ಶೇಖರ್ ಇದೇ ಶಾಲೆಯ ಚೇರ್‌ಮನ್ ಆಗಿದ್ದ ಅನ್ನೋದು ನಾಚಿಕೆಗೇಡಿನ ವಿಷಯ.
ಈತ ವಿಜಯಪುರದಲ್ಲಿ ಬ್ಯಾಂಕ್ ಕಳ್ಳತನ ಮಾಡಿ, ಅದನ್ನು ಹುಬ್ಬಳ್ಳಿ ತೆಗೆದುಕ“ಂಡು ಬಂದಿದ್ದ. ಇಲ್ಲಿಯೇ ಚಿನ್ನ ಕರಗಿಸಿ, ಶಾಲೆಯೇ ಚಿನ್ನ ಬಚ್ಚಿಡಲು ಸುರಕ್ಷಿತ ಸ್ಥಳವೆಂದು ತಿಳಿದು, ಶಾಲೆಯಲ್ಲಿಯೇ ಚಿನ್ನ ಬಚ್ಚಿಟ್ಟಿದ್ದ. ಇದೀಗ ಪೋಲೀಸರು ಇವರು ಚಿನ್ನ ಕರಗಿಸಲು ಬಳಸಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದು, ಹುಬ್ಬಳ್ಳಿಯಲ್ಲಿಯೇ ವಿಚಾರಣೆ ನಡೆಸಿದ್ದಾರೆ.