- Advertisement -
Hubli News: ಹುಬ್ಬಳ್ಳಿ: ಬಿಜೆಪಿ ಪಕ್ಷದಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಹಿನ್ನೆಲೆ, ಹುಬ್ಬಳ್ಳಿಯಲ್ಲಿ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ.
ಯತ್ನಾಳ್ ಅವರು ಒಬ್ಬ ಹಿರಿಯ ಹಾಗೂ ಜನಪ್ರಿಯ ನಾಯಕರು ಅನೇಕ ಹುದ್ದೆ ಅಲಂಕರಿಸಿದವರು. ಯತ್ನಾಳ್ ಅವರು ನೇರ ನಡೆ ನೇರ ನುಡಿಯಿಂದ ಪ್ರಸಿದ್ಧಿ ಪಡೆದ ವ್ಯಕ್ತಿ. ಇಂದು ಅವರು ಪಕ್ಷದಿಂದ ದೂರವಾಗಿರುವುದು ಬಹಳ ದುಖಃವಾಗಿದೆ. ಅವರು ಪಕ್ಷದಿಂದ ದೂರವಾಗಿರುವುದು ಸಾಕಷ್ಟು ನೋವುಂಟು ಮಾಡಿದೆ. ಪಕ್ಷದ ಯಾವುದೇ ಕಾರ್ಯಕರ್ತ ಪಕ್ಷದಿಂದ ದೂರ ಹೋದಾಗ ನೋವುಂಟಾಗುತ್ತೆ. ಹೈಕಮಾಂಡ್ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ. ಹೈಕಮಾಂಡ್ ನಿರ್ಧಾರವನ್ನ ವಿಶ್ಲೇಷಣೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವೂ ಸರಿಯಾಗುವ ಭರವಸೆ ಇದೆ ಎಂದು ಬೆಲ್ಲದ್ ಹೇಳಿದ್ದಾರೆ.
- Advertisement -