News: ಹುಬ್ಬಳ್ಳಿಯಿಂದ ಚಿಕ್ಕಮಗಳೂರಿಗೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ ಇಲಾಖೆ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ.
ರೈಲು ಸಂಖ್ಯೆ 07341 ಹುಬ್ಬಳ್ಳಿಯಿಂದ ಜೂನ್ 20 ಮತ್ತು 21 ರಂದು ಬೆಳಿಗ್ಗೆ 5 ಗಂಟೆಗೆ ಹೊರಟು ಮಧ್ಯಾಹ್ನ 11.15 ಕ್ಕೆ ಚಿಕ್ಕಮಗಳೂರಿಗೆ ತಲುಪಲಿದೆ.
ಮರುಪ್ರಯಾಣದಲ್ಲಿ 07342 ರೈಲು ಚಿಕ್ಕಮಗಳೂರಿನಿಂದ ಸಂಜೆ 5.30 ಕ್ಕೆ ಹೊರಟು ರಾತ್ರಿ 11.20 ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.
ಈ ವಿಶೇಷ ರೈಲುಗಳು ಎರಡೂ ದಿಕ್ಕಿನಲ್ಲಿ ತಲಾ ಎರಡು ಟ್ರಿಪ್ಗಳಲ್ಲಿ ಸಂಚರಿಸಲಿವೆ. ಮಾರ್ಗ ಮಧ್ಯೆ ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು ಮತ್ತು ಬೀರೂರು ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಒಟ್ಟು 10 ಬೋಗಿಗಳಿರುವ ಈ ರೈಲಿನಲ್ಲಿ ಒಂದು ಸ್ಲೀಪರ್, ಏಳು ಸಾಮಾನ್ಯ ಹಾಗೂ ಎರಡು ಎಸ್ಎಲ್ಆರ್ ಬೋಗಿಗಳು ಒಳಗೊಂಡಿರುತ್ತವೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಸೇವೆ ಒದಗಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.




