- Advertisement -
Hubli News: ಸಿಎಂ ಸಿದ್ಧರಾಮಯ್ಯನವರ ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಸಿಎಂ ಜೊತೆಗೆ ಮಾತ್ರವಲ್ಲದೇ ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿಎಂ ಅವರೇ ಹಣಕಾಸು ಮಂತ್ರಿ ಆಗಿರುವುದರಿಂದ ಏನ್ ಮಾಡಲು ಆಗುವುದಿಲ್ಲ, ನಾನೇ ಹಣಕಾಸು ಮಂತ್ರಿ ಆಗಿದ್ದರೇ ಅರಿಯರ್ಸ್, ಅನುದಾನ ಎಲ್ಲವನ್ನೂ ಕೊಟ್ಟು ಬಿಡುತ್ತಿದೆ ಎಂದರು.
38 ತಿಂಗಳ ಹಿಂಬಾಕಿಯ ಒಂದು ಡಿಸ್ಪೂಟ್ ಬಿಟ್ಟರೇ ಬೇರೆ ಯಾವುದೇ ರೀತಿಯಲ್ಲಿ ಸಾರಿಗೆ ಸಂಸ್ಥೆಗೆ ನಾವು ಬಾಕಿ ಕೊಡುವ ಹಣವನ್ನು ಉಳಿಸಿಕೊಂಡಿಲ್ಲ ಎಂದು ಅವರು ಹೇಳಿದರು.
- Advertisement -