Thursday, October 16, 2025

Latest Posts

Hubli News: ಗೃಹಸಚಿವ ಅಮಿತ್ ಷಾ ಅಂಬೇಡ್ಕರ್ ಬಗ್ಗೆ ಕೊಟ್ಟ ಹೇಳಿಕೆ ಖಂಡಿಸಿ, ಪ್ರತಿಭಟನೆ

- Advertisement -

Hubli News: ಹುಬ್ಬಳ್ಳಿ: ಕೇಂದ್ರದಲ್ಲಿ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವ ಬದಲು, ದೇವರ ನಾಮಸ್ಮರಣೆ ಮಾಡಿದ್ದರೆ ಚೆನ್ನಾಗಿತ್ತು ಎಂದು ಕಾಂಗ್ರೆಸ್ ಅವರಿಗೆ ಟೀಕಿಸಿದ್ದರು. ಇದೇ ಹೇಳಿಕೆಯನ್ನು ವಿರೋಧಿಸಿ, ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿ, ಆಕ್ರೋಶ ಹೊರಹಾಕಲಾಗಿದೆ.

ಹಲವು ಸಂಘಟನೆಗಳು ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಸಮತಾ ಸೇನಾ ಕರ್ನಾಟಕ, ಸಮಗಾರ ಹರಳಯ್ಯ ಸಮಾಜ ಸೇರಿ ವಿವಿಧ ದಲಿತ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದೆ. ಅಮಿತ್ ಶಾ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಲಾಗಿದೆ.

ಈ ವೇಳೆ ಪೊಲೀಸರು ಪ್ರತಿಭಟನೆಗೆ ಅಡ್ಡಿಪಡಿಸಿದ್ದು, ಕೂಡಲೇ ಅಮಿತ್ ಶಾರನ್ನ ಗೃಹ ಖಾತೆಯಿಂದ ವಜಾಗೊಳಿಸುವಂತೆ ಪ್ರತಿಭಟನಾಕಾಾರರು ಆಗ್ರಹಿಸಿದ್ದಾರೆ.  ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಂಘಟನೆಗಳಿಂದ ಮನವಿ ಮಾಡಲಾಗಿದೆ.

- Advertisement -

Latest Posts

Don't Miss