- Advertisement -
Hubli News: ಹುಬ್ಬಳ್ಳಿ: ರಂಗ ಪಂಚಮಿ, ಮತ್ತು ರಂಜಾನ್ ಹಬ್ಬಗಳು ಆಗಮಿಸುತ್ತಿದ್ದಂತೆ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಪೊಲೀಸರು ರಸ್ತೆಗಿಳಿದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ರೂಟ್ ಮಾರ್ಚ್ ಮಾಡಿದರು.
ಹೋಳಿ ಹುಣ್ಣಿಮೆಯಾಗಿ ಐದು ದಿನಕ್ಕೆ ಹುಬ್ಬಳ್ಳಿಯಲ್ಲಿ ರಂಗ ಪಂಚಮಿಯನ್ನು ಅತೀ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಸುತ್ತಮುತ್ತಲಿನ ಜಿಲ್ಲೆಗಳಿಂದ ಜನರು ಹುಬ್ಬಳ್ಳಿಗೆ ರಂಗ ಪಂಚಮಿ ಆಚರಿಸಲು ಬರುತ್ತಾರೆ. ಆದ ಕಾರಣ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಡಿಸಿಪಿಗಳಾದ ರವೀಶ್ ಆರ್, ಮಾನಿಂಗ ನಂದಗಾಂವಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಚನ್ನಮ್ಮ ಸರ್ಕಲ್, ಕಮರಿಪೇಟ್, ರಾಯಣ್ಣ ಸರ್ಕಲ್, ದಾಜಿಬಾನ ಪೇಟೆ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ರೂಟ್ ಮಾರ್ಚ್ ಮಾಡಿದರು.
- Advertisement -