Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ, ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ಧಪ್ಪ ಕೆಂಚಣ್ಣವರ್ ಎಂಬ ವ್ಯಕ್ತಿ ಸಾಲದ ವಿಚಾರವಾಗಿ ಆತಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ರಾತ್ರಿ ಡೆತ್ ನೋಟ್ ಬರೆದು ಸ್ಟೇಟಸ್ ಇಟ್ಟುಕೊಂಡಿದ್ದಾನೆ. ಮಹೇಶ ಎಂಬುವವನಿಂದ ಹಲವು ವರ್ಷಗಳ ಹಿಂದೆ 10 ಲಕ್ಷ ಸಾಲ ಪಡೆದುಕೊಂಡಿದ್ದ ಎಂಬ ಮಾಹಿತಿ ಇದೆ. ಮಹೇಶ ಎಂಬುವವ ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಮಾಡಲಾಗಿದೆ. ಬಡ್ಡಿ ವಿಚಾರವಾಗಿ ಮನನೊಂದು ನಿನ್ನೆ ರಾತ್ರಿ ಸಿದ್ಧಪ್ಪ ಟ್ರಕ್ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮೃತ ಸಿದ್ಧಪ್ಪನ ಕುಟುಂಬಸ್ಥರಿಂದಲೂ ಆರೋಪ ಮಾಡಲಾಗಿದೆ.
ಸಾಲ ಪಡೆದಿದ್ದ ವಿಚಾರವಾಗಿಯೂ ಸಹ ಸಿದ್ದಪ್ಪ ಅವರ ಕುಟುಂಬಸ್ಥರಿಗೆ ತಿಳಿಸಿರಲಿಲ್ಲವಂತೆ. ಆರೋಪಿ ಮಹೇಶ ಕಿರುಕುಳದ ಬಗ್ಗೆ ಮೃತ ಸಿದ್ದಪ್ಪ ಡೆತ್ ನೋಟ್ ನಲ್ಲಿ ಬರೆದಿದ್ದು, ಈಗಾಗಲೇ ಆರೋಪಿ ಮಹೇಶ ನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಸಾಲ ಹಾಗೂ ಬಡ್ಡಿ ವಿಚಾರವಾಗಿ ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಶಿಕುಮಾರ್ ಹೇಳಿದರು.