Hubli News: ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಸುದ್ದಿಗೋಷ್ಢಿ ನಡೆಸಿ ಮಾತನಾಡಿದ್ದು, ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಸಾಧನೆಯ ಸಮಾವೇಶದಲ್ಲಿ ಹಳೆ ರೆಡಿಯೋ ತರ ಹೇಳಿದ್ದನ್ನು ಹೇಳಿದ್ರು. ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಅಂತ ಸುಳ್ಳು ಹೇಳ್ತಾರೆ. ಸಿಎಮ್ ಭಾಷಣ ಸುಳ್ಳುನಿಂದ ಕೂಡಿತು. ಸಿದ್ದರಾಮಯ್ಯ ಅವರದ್ದು ಬರೀ ಗಾನ ಭಜನಾ ಕೆಲಸ..! ಅಭಿವೃದ್ಧಿ ಕೆಲಸಗಳು ಸಂಪೂರ್ಣ ನಿಂತು ಹೋಗಿದೆ. ಎರಡು ವರ್ಷದಿಂದ ಶಾಸಕರಿಗೆ ಅನುದಾನ ಬಂದಿಲ್ಲ. ಬೆಲೆ ಏರಿಕೆ, ಮಳೆಹಾನಿಯಿಂದ ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಕೋಮಾ ಸ್ಥಿತಿಗೆ ತಲುಪಿದೆ. ಕೇವಲ ಗ್ಯಾರಂಟಿ ಹೆಸರು ಹೇಳಿಕೊಂಡಿ ಓಡಾಡ್ತಾರೆ. ಅತಿವೃಷ್ಟಿ ಹಾನಿ ಸ್ಥಳಗಳಿಗೆ ಯಾವುದೇ ಸಚಿವರು ಭೇಟಿ ನೀಡುತ್ತಿಲ್ಲ ಎಂದು ಶ್ರೀರಾಮುಲು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ವಸೂಲಿ ಮಾಡುವುದರಲ್ಲಿ ಕಾಂಗ್ರೆಸ್ ನಿಪುಣತೆ ಪಡದಿದೆ. ಹುಟ್ಟೋದ್ರಿಂದ ಸಾಯುವತನಕ ಎಲ್ಲರಿಂದ ವಸೂಲಿ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಣದ ನುಂಗಿದವರನ್ನು ಪಕ್ಕದಲ್ಲಿ ಕೂಡಿಸಿಕೊಂಡು ರಾಹುಲ್ ಗಾಂಧಿ ಹಿಂದುಳಿದವರ ಬಗ್ಗೆ. ಮಾಜಿ ಸಚಿವ ನಾಗೇಂದ್ರ ಊಟಿ ಹಣ ಮರಳಿಕಟ್ಟಿದರೆ ಮತ್ತೆ ಸಚಿವರನ್ನಾಗಿ ಮಾಡ್ತಾರಂತೆ. ಜಿಂದಾಲ್ ನಲ್ಲಿ ಕೂತು ಸಿಎಮ್ ಮಾತನಾಡಿದ್ದಾರೆ. ನಿಗಮದಿಂದ ಲೂಟಿ ಮಾಡಿದ ಹಣ ಮರಳಿ ಕಟ್ಟಿಸಿದ್ರೆ ಮತ್ತೆ ಸಚಿವ ಸ್ಥಾನ ನೀಡುವುದಾಗಿ ಸಿಎಮ್ ಹೇಳಿದ್ದಾರೆ. ಆಗ ನಾಗೇಂದ್ರ ತುಕಾರಾಂ ಗೆ 20 ಕೋಟಿ ನೀಡಿದ್ದಾಗಿ ಹೇಳಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಪ್ರತಿ ತಿಂಗಳು ಗ್ಯಾರಂಟಿ ಹಣ ನೀಡುವುದಾಗಿ ನಾವು ಹೇಳಿಲ್ಲ ಎಂಬ ಡಿಕೆಶಿ ಹೇಳಿಕೆಗೆ ಶ್ರೀರಾಮುಲು ತಿರುಗೇಟು ನೀಡಿದ್ದು, ಟ್ಯಾಕ್ಸ್ ವಸೂಲಿ ಅದಂಗೆ ಹಣ ಬಿಡುಗಡೆ ಮಾಡ್ತಿವಿ ಅಂತಾನೆ. ಅವನು ಮೊದಲೇ ಬೋಗಳಬೇಕಿತ್ತು.. ಅವನು ಮೊದಲೇ ಹೇಳಬೇಕಿತ್ತು, ಆಗ ಪ್ರತಿ ತಿಂಗಳು ಕೊಡುತ್ತೇವೆ ಅಂತ ಹೇಳಿ ಈಗ ಉಲ್ಟಾ ಹೊಡೆದಿದ್ದಾರೆ ಎಂದು ಶ್ರೀರಾಮುಲು ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಏನಾದರೂ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ರಾ? ಭಯೋತ್ಪಾದಕ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು ಎಂಬ ಆರೋಪಿಸ್ತಾರೆ. ಮೊದಲೇ ಗೊತ್ತಿದ್ದರೆ ಕೆಡವಿ ಹಾಕಿ ಹೊಡೆಯುತ್ತಿದ್ದರು. ಮೋದಿಯವರಿಗೆ ಗೊತ್ತಿದ್ರೆ ಸುಮ್ಮನೆ ಬಿಡುತ್ತಿದ್ರಾ? ಕೆಡವಿಹಾಕಿ ಹೊಡೆಯುತ್ತಿದ್ದರು. ಕಾಂಗ್ರೆಸ್ ನವರು ಏನ್ ಬೇಕಾದ್ರು ಮಾತನಾಡ್ತಾರೆ. ಅವರ ನಾಲಿಗೆ ಮತ್ತು ತಲೆಗೆ ಲಿಂಕ್ ಇಲ್ಲ. ಪೆಹಲ್ಗಾಮ್ ದಾಳಿಕೋರರು ಅಡಗು ತಾಣಗಳು ನಾಶ ಮಾಡಿದ್ದೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.