Hubli News: ಹುಬ್ಬಳ್ಳಿ: ಈ ಹಿಂದೆ ಇದ್ದ ಸರ್ಕಾರ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಒಂದೇ ಒಂದು ಪೋಸ್ಟ್ ತುಂಬಿಕೊಂಡಿಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೇಮಕಾತಿ ಪ್ರಕ್ರಿಯೆ ಇನ್ನೂ ಕೂಡ ಮುಗದಿಲ್ಲ. ಎಚ್.ಕೆ.ಪಾಟೀಲ ಅವರು ಕೂಡ ಕರೆ ಮಾಡಿ ಮಾತನಾಡಿದ್ದಾರೆ. ಈಗ 1000 ನೇಮಕಾತಿ ಆಗಿದೆ. ಇನ್ನೂ ಸಾವಿರ ನೇಮಕಾತಿಗೆ ಅನುಮೋದನೆ ಕೂಡ ಸಿಕ್ಕಿದೆ. ಆದಷ್ಟು ಬೇಗ ಈ ಅಭ್ಯರ್ಥಿಗಳನ್ನು ಈ ಲಿಸ್ಟ್ ನಲ್ಲಿ ತೆಗೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
2019ರಲ್ಲಿ ಕರೆದಿದ್ದ ನೇಮಕಾತಿ ಇದುವರೆಗೂ ಕೈ ಬಿಟ್ಟಿದ್ದರು ನಾನು ಬಂದ ಮೇಲೆ ಚಾಲನೆ ಸಿಕ್ಕಿದೆ. ಒಂದು ಸಾವಿರ ಜನರಿಗೆ ಅನುಕಂಪದ ಆದಾರದ ಮೇಲೆ ನೌಕರಿ ಕೊಟ್ಟಿದ್ದೇವೆ ಎಂದು ಅವರು ಹೇಳಿದರು.
2019 ರಿಂದ 2023ರ ವರೆಗೂ ಒಂದೇ ಒಂದು ಪೋಸ್ಟ್ ತುಂಬಿಕೊಂಡಿಲ್ಲ. ಒಟ್ಟು 9000 ಜನರಿಗೆ ನೌಕರಿ ಕೊಟ್ಟಿದ್ದೇವೆ. ಬಿಎಂಟಿಸಿ 7000 ಅಗತ್ಯವಿದೆ, ವಾಕರಸಾಸಂ 5000 ಅಗತ್ಯವಿದೆ ಈ ನಿಟ್ಟಿನಲ್ಲಿ ಬಿಎಂಟಿಸಿಯಲ್ಲಿ ಜಾಸ್ತಿ ತೆಗೆದುಕೊಂಡಿದೆ. ನಾವು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತ ಬೇದ ಭಾವ ಮಾಡುತ್ತಿಲ್ಲ. ನಾವೆಲ್ಲರೂ ಕರ್ನಾಟಕದವರು ಅಷ್ಟೇ..
ಈ ಹಿಂದೆ ಇದ್ದ ಸರ್ಕಾರ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಒಂದೇ ಒಂದು ಪೋಸ್ಟ್ ತುಂಬಿಕೊಂಡಿಲ್ಲ. ನಾವು ಸಾವಿರಾರು ಜನರಿಗೆ ನೇಮಕಾತಿ ಮೂಲಕ ಉದ್ಯೋಗ ಕೊಟ್ಟಿದ್ದೇವೆ ಎಂದರು.