ಹುಬ್ಬಳ್ಳಿ: ಮೃತಪಟ್ಟ ಬಾಲಕ ಜೀವಂತ ಪ್ರಕರಣ: ಕಿಮ್ಸ್ ನಲ್ಲಿ ಯಾವುದೇ ಡೆತ್ ಸರ್ಟಿಫಿಕೇಟ್ ಕೊಟ್ಟಿಲ್ಲ ಎಂದು ಕಿಮ್ಸ್ ಆಸ್ಪತ್ರೆಯ ನಿದ
ಡಾ. ರಾಮಲಿಂಗಪ್ಪ ಸ್ಪಷ್ಟನೆ…
ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದ್ದಾನೆ ಎಂದು ನಾವು ಯಾವುದೇ ಸರ್ಟಿಫಿಕೇಟ್ ಕೊಟ್ಟಿಲ್ಲ. ಮಗು ಜೀವಂತ ಇರುವಾಗಲೇ ಡಿಸ್ಚಾರ್ಜ ಮಾಡಿಸಿಕೊಂಡು ಬಾಲಕ ಸಂಬಂಧಿಕರು ಹೋಗಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಥಾನಿ ಹೇಳಿದ್ದಾರೆ.
ಬಾಲಕ ಮೃತಪಟ್ಟಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡಲು ಹೋದ ಸಂದರ್ಭದಲ್ಲಿ ಜೀವಂತವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, ಕಳೆದ ಎಂಟತ್ತು ದಿನದ ಹಿಂದೆ ಬಾಲಕನಿಗೆ ಮೆದುಳಿನಲ್ಲಿ ನೀರು ತುಂಬಿಕೊಂಡ ಗದಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ನಮಲ್ಲಿ ಬಂದಿದ್ದರು. ನಮ್ಮ ವೈದ್ಯರು ಮೆದಳು ಜ್ವರದ ಕಾರಣದಿಂದ ಚಿಕಿತ್ಸೆ ನೀಡಿದ್ದಾರೆ
ಆದ್ರೆ ಬಾಲಕನ ಸಂಬಂಧಿಗಳು ಏಕಾಏಕಿಯಾಗಿ ಮಗು ಜೀವಂತ ಇರುವಾಗಲೇ ಡಿಸ್ಚಾರ್ಜ ಮಾಡಿಕೊಂಡು ತಮ್ಮ ಸ್ವ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಗ್ರಾಮಸ್ಥರು ಮಗು ಬದುಕಿದೆ. ಯಾಕೆ ಕರೆದುಕೊಂಡು ಬಂದ್ರಿ ಎಂದಾಗ ನವಲಗುಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮತ್ತೆ ತಡರಾತ್ರಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಆದ್ರೆ ಮಗುವಿನ ಸ್ಥಿತಿಯ ಬಗ್ಗೆ ಏನು ಹೇಳಲು ಆಗುತ್ತಿಲ್ಲ ಎಂದರು.
ಬಜ್ಜಿ ಮಾರುತ್ತಿದ್ದ ಹುಡುಗ, ಭಾರತದ ಅತೀ ಶ್ರೀಮಂತ ಉದ್ಯಮಿಯಾದ ಕಥೆ- ಭಾಗ 1
Dharawad : ಸೌಜನ್ಯ ಪ್ರಕರಣದಲ್ಲಿ ತಪಿತಸ್ಥರಿಗೆ ನ್ಯಾಯ ಸಿಗಲೆಂದು ಒತ್ತಾಯ.
Joshi : ಘಮಂಡಿ ಘಟಬಂಧನ ಉಳಿಸಿಕೊಳ್ಳಲು ಕಾಂಗ್ರೆಸ್ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ.