Saturday, July 12, 2025

Latest Posts

ತತ್ಕಾಲ್‌ ಸೇವೆಯ ಫೀಸ್‌ ಪಡೆದು ಸಾಮಾನ್ಯ ವರ್ಗದ ಪಾಸ್‌ಪೋರ್ಟ್ ನೀಡುತ್ತಿದೆಯಾ ಹುಬ್ಬಳ್ಳಿ ಸೇವಾ ಕೇಂದ್ರ..?

- Advertisement -

Hubli News: ಇದು ಉತ್ತರ ಕರ್ನಾಟಕದ ಏಕೈಕ ಪಾಸ್ ಪೋರ್ಟ್ ಸೇವಾ ಕೇಂದ್ರ.. ಜನರಿಗೆ ಶೀಘ್ರವಾಗಿ ಸೇವೆ ಒದಗಿಸಿ ಮಾದರಿಯಾಗಬೇಕಿದ್ದ ಹುಬ್ಬಳ್ಳಿ ಪಾಸ್ ಪೋರ್ಟ್ ಸೇವಾ ಕೇಂದ್ರ,ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ, ದುರ್ವತನೆಯಿಂದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.. ಮೂಲಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ..

ಉತ್ತರ ಕರ್ನಾಟಕದ ಜನತೆಗೆ ಶೀಘ್ರವಾಗಿ ಪಾಸ್ ಪೋರ್ಟ್ ಸೇವೆ ಒದಗಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಹುಬ್ಬಳ್ಳಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಆರಂಭಿಸಿದೆ. ಈ ಸೇವೆ ಕೇಂದ್ರದಿಂದ ಉಪಯೋಗ ಆಗಿದ್ದಕ್ಕಿಂತ ಅನುಕೂಲಗಳೆ ಆಗಿದ್ದು ಹೆಚ್ಚು.. ವಿದೇಶಕ್ಕೆ ಹಾರುವ ಆಸೆಯಿಂದ ಹುಬ್ಬಳ್ಳಿಯ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ , ಧಾರವಾಡ, ಗದಗ, ಕಾರವಾರ, ಹಾವೇರಿ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಸೇರಿದಂತೆ ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಯ ಸಾವಿರಾರು ಜನ ಬರ್ತಾರೆ. ‌ ಆದರೆ ಪಾಸ್ ಪೋರ್ಟ್ ಕಚೇರಿಯ ಸಿಬ್ಬಂದಿ ದುರ್ತನೆ ಯಿಂದ ಒಂದು ದಿನದಲ್ಲಿ ಆಗುವ ಕೆಲಸಕ್ಕೆ ಹತ್ತಾರು ದಿನ ತೆಗೆದುಕೊಳ್ಳುತ್ತಿದೆ. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಇಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ತತ್ತ್ಕಾಲನಲ್ಲಿ ಪಾಸ್ ಪೋರ್ಟ್ ಸೇವೆಗೆಂದು ಫೀ ಪಡೆದು ಸಾಮಾನ್ಯ ವರ್ಗದಲ್ಲಿ ಪಾಸ್ ಮಂಜೂರು ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ತತ್ತಕಾಲ್‌ನಲ್ಲಿ ಪಾಸ್ ಪೋರ್ಟ್ ಸೇವೆ ಪಡೆಯಲು 3,500 ರೂ ಶುಲ್ಕವಿದೆ. ಎರಡರಿಂದ ಮೂರು ದಿನಗಳಲ್ಲಿ ಪಾಸ್ ಪೋರ್ಟ್ ಬರಲಿದ್ದು, ಪೊಲೀಸ್ ವಿಚಾರಣೆ ಬಳಿಕ ಮಾಡಲಾಗುತ್ತದೆ. ಆದರೆ ಸಾಮಾನ್ಯ ವರ್ಗದಲ್ಲಿ 1500 ಫ್ರೀ ಇದ್ದು, ಪೊಲೀಸರ ವಿಚಾರಣೆ ಅದು ಇದು ಅಂತ ಸುಮಾರು 15 ರಿಂದ‌ 30 ದಿನಗಳಲ್ಲಿ ಪಾಸ್ ಪೋರ್ಟ್ ಬರುತ್ತದೆ..

ಆದರೆ ಹುಬ್ಬಳ್ಳಿ ಪಾಸ್ ಪೋರ್ಟ್ ಸೇವಾ ಕೇಂದ್ರದಲ್ಲಿ ತತ್ತಕ್ಕಾನಲ್ಲಿ ಪಾಸ್ ಹಣವನ್ನು ಪಡೆದು, ಸಾಮಾನ್ಯ ವರ್ಗದಲ್ಲಿ ಪಾಸ್ ಪೋರ್ಟ್ ನೀಡಲಾಗುತ್ತಿದೆ.‌ ಇದರಿಂದ ಒಂದು ಕಡೆ ಹಣ, ಮತ್ತೊಂದು ಕಡೆ ಸಮಯದ ವ್ಯಯದ ಜೊತೆಗೆ ಮಾನಸಿಕ ಕಿರಿಕಿರಿಯನ್ನು ಜನ ಅನುಭವಿಸುವಂತಾಗಿದೆ.. ಈ ಬಗ್ಗೆ ದೂರು ನೀಡಲು ಹೋದ್ರೆ ಯಾವೊಬ್ಬ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ. ಇನ್ನೂ ಸಹಾಯಕ ಪಾಸ್ ಪೋರ್ಟ್ ಆಯುಕ್ತೆ ಅನಿತಾ ಕುಮಾರಿ ಗ್ರಾಹಕರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಎನ್ನುವುದು ಜನರ ಆರೋಪ.

ಇನ್ನೂ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭವಾಗಿ ಇಷ್ಟು ವರ್ಷವಾದ್ರೂ , ಮೂಲಭೂತ ಸೌಕರ್ಯಗಳು ಇಲ್ಲದೆ ಜನ ಪರದಾಡುವಂತಾಗಿದೆ. ಕುಡಿಯುವ ನೀರು , ಶೌಚಾಲಯ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಇಲ್ಲದೆ, ನೆಲದ ಮೇಲೆ ಕುಳಿತಕೊಳ್ಳಬೇಕಾಗಿದೆ. ಇಷ್ಟೆಲ್ಲಾ ನ್ಯೂನತೆಗಳು ಇದ್ದರೂ ಸಹ ಸೇವಾ ಕೇಂದ್ರ ಯಾವೊಬ್ಬ ಅಧಿಕಾರಿಗಳು ಜನರ ಸಮಸ್ಯೆ ಆಲಿಸುತ್ತಿಲ್ಲ ಎನ್ನುವುದು ಜನರ ಆರೋಪವಾಗಿದೆ..

– ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

ಕ್ರಿಕೇಟಿಗ ರವಿಂದ್ರ ಜಡೇಜಾ ವಿರುದ್ಧ ಅಪ್ಪನ ಆರೋಪ: ಸೊಸೆ ರಿವಾಬ ಹೇಳಿದ್ದೇನು..?

ಬಾಲಕರಾಮನ ದರ್ಶನ ಪಡೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್

ಅಭಿಮಾನಿಯ ಮೊಬೈಲ್ ಕಸಿದು ಎಸೆದ ಬಾಲಿವುಡ್ ಗಾಯಕ ಆದಿತ್ಯ ನಾರಾಯಣ್

- Advertisement -

Latest Posts

Don't Miss