Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್‌ಲಿ 5 ವರ್ಷದ ಅಂಗವಿಕಲ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ನಡೆದಿದ್ದು, ಅತ್ಯಾಚಾರಿಯನ್ನು ಈಗಾಗಲೇ ಎನ್‌ಕೌಂಟರ್ ಮಾಡಲಾಗಿದೆ.
ಇಂದು ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಸಂತೋಷ್ ಲಾಡ್, ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿ, ಬಾಲಕಿಯ ಮೃತದೇಹ ವೀಕ್ಷಣೆ ಮಾಡಿದ್ದಾರೆ. ಬಳಿಕ ಘಟನೆ ಕುರಿತು ಅಧಿಕಾರಿಗಳು ಮತ್ತು ಕಿಮ್ಸ್ ವೈದ್ಯರಿಂದ ಸಂತೋಷ್ ಲಾಡ್ ಮಾಹಿತಿ ಪಡೆದಿದ್ದಾರೆ.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ತಲೆ ತಗ್ಗಿಸುವಂತಹ ಘಟನೆ ಇದು. ಮನುಷ್ಯನಿಗೆ ಈ ರೀತಿ ಮನಸ್ಥಿತಿ ತಲೆ ತಗ್ಗಿಸುವಂತಿದೆ. ಮಗುವನ್ನು ನೋಡಲಿಕ್ಕಾಗದ ಸ್ಥಿತಿಯಿದೆ. ಆರೋಪಿ ಡ್ರಗ್ಸ್ ಬಳಕೆ ಬಗ್ಗೆ ಗೊತ್ತಿಲ್ಲಾ, ಮರಣೋತ್ತರ ವರದಿ ನಂತರ ಗೊತ್ತಾಗಲಿದೆ. ಸರ್ಕಾರ ಹತ್ತು ಲಕ್ಷ ಪರಿಹಾರ ಕೊಡುತ್ತದೆ. ಹೆಚ್ಚಿನ ಪರಿಹಾರಕ್ಕೆ ಸಿಎಂಗೆ ಮನವಿ ಮಾಡುತ್ತೇನೆ. ಅನೇಕ ಕಡೆ ಸಿಸಿಟಿವಿ ಕ್ಯಾಮರಾಗಳಿಲ್ಲಾ. ಸೈಕೋಪಾಥ್ ಗಳು ಈ ರೀತಿ ಕೃತ್ಯ ಮಾಡುತ್ತಾರೆ ಎಂದು ಸಂತೋಷ್ ಬೇಸರ ವ್ಯಕ್ತಪಡಿಸಿದ್ದಾರೆ.