National News: ಆನ್‌ಲೈನ್‌ನಲ್ಲಿ ಖರೀದಿಸಿದ್ದ ಐಸ್ ಕ್ರೀಮ್ನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದು, ಮಹಿಳೆಯೊಬ್ಬರು ಆಘಾತಗೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನಲ್ಲಿ ಈ ಘಟನೆ ವರದಿಯಾಗಿದ್ದು, ಮಲಾಡ್ ಉಪನಗರದ ನಿವಾಸಿಯಾಗಿರುವ ಮಹಿಳೆ ಯುಮ್ಮೋ ಐಸ್ ಕ್ರೀಮ್ಸ್ನಿಂದ ಕೋನ್ ಐಸ್ ಕ್ರೀಮ್ನ್ನು ಆನ್ ಲೈನ್ ಮೂಲಕ ತರಿಸಿದ್ದರು. ಐಸ್ ಕ್ರೀಮ್ ಕೋನ್‌ನಲ್ಲಿ ಬೆರಳಿನ ತುಂಡನ್ನು ನೋಡಿದ ಮಹಿಳೆ ಕಿರುಚಲು ಪ್ರಾರಂಭಿಸಿದ್ದು, ನಂತರ ಅಲ್ಲೇ ಮೂರ್ಛೆ ಹೋಗಿದ್ದಾರೆ. ಕೆಲಕ್ಷಣ ಆಕೆಯ ಕುಟುಂಬದ ಸದಸ್ಯರಿಗೂ ಏನೂ ಅರ್ಥವಾಗಿರಲಿಲ್ಲ. ಆದರೆ ಆಕೆಗೆ ಮೂರ್ಛೆ ಬಂದಾಗ ಐಸ್ ಕ್ರೀಮ್ನಲ್ಲಿ ಬೆರಳು ಇರುವುದು ಹೇಳಿದ್ದಾರೆ.
27 ವರ್ಷದ ಓರ್ಲೆಮ್ ನಿವಾಸಿ ಬ್ರೆಂಡನ್ ಸೆರಾವೊ ಅವರು ಬುಧವಾರ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಮೂಲಕ ಯುಮ್ಮೋ ಕಂಪನಿಯಿಂದ ಐಸ್ ಕ್ರೀಮ್ ಕೋನ್ ಅನ್ನು ಆರ್ಡರ್ ಮಾಡಿದ್ದರು. ಐಸ್ ಕ್ರೀಮ್ ಕೋನ್ ಒಳಗೆ ಮಾನವನ ಬೆರಳಿನ ತುಂಡು ಸುಮಾರು 2 ಸೆಂ.ಮೀ ಉದ್ದವಿತ್ತು ಎಂದು ಅವರು ಹೇಳಿದ್ದಾರೆ. ಸೆರಾವೊ ವೃತ್ತಿಯಲ್ಲಿ ಎಂಬಿಬಿಎಸ್ ವೈದ್ಯೆ. ಬೆರಳು ಕಂಡ ತಕ್ಷಣ ಪೊಲೀಸರಿಗೆ ಧಾವಿಸಿ ದೂರು ದಾಖಲಿಸಿದ್ದಾರೆ.
ಮಾನವ ಬೆರಳಿನ ತುಂಡು ಕಂಡು ಆತಂಕಗೊಂಡ ಮಹಿಳೆ ಐಸ್ ಕ್ರೀಮ್ ಹಿಡಿದುಕೊಂಡು ಮಲಾಡ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಮಲಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾದ ತಕ್ಷಣ ಪೊಲೀಸರು ಐಸ್‌ಕ್ರೀಮ್ ಸಹಿತ ಮಾನವನ ಬೆರಳು ಎನ್ನಲಾದ ತುಂಡನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಐಸ್ ಕ್ರೀಮ್ ತಯಾರಿಸಿ ಪ್ಯಾಕ್ ಮಾಡುವ ಸ್ಥಳವನ್ನೂ ಶೋಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಯಮ್ಮೋ ವಿರುದ್ಧ ಆಹಾರ ಕಲಬೆರಕೆ ಮತ್ತು ಮಾನವ ಜೀವಕ್ಕೆ ಅಪಾಯ ತಂದಿರುವ ಪ್ರಕರಣ ದಾಖಲಾಗಿದೆ.
ಅಭಿಮಾನಿಗಳನ್ನು ಠಾಣೆಯಿದ ದೂರವಿಡಲು ಅನ್ನಪೂರ್ಣೆಶ್ವರಿ ಠಾಣೆ ಸುತ್ತಮುತ್ತ 144 ಸೆಕ್ಷನ್ ಜಾರಿ
ಯಡಿಯೂರಪ್ಪ ಬಂಧನ? ಪೋಕೋ ಕೇಸ್ನಲ್ಲಿ ಬಿಎಸ್ವೈ ಬಂಧನಕ್ಕೆ ಸಿದ್ಧತೆ..!