Hubli News: ಹುಬ್ಬಳ್ಳಿ: ಕಳೆದ ಭಾನುವಾರ ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಅಪರಾಧಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ ಘಟನೆ ನಡೆದಿದೆ. ಆರೋಪಿ ಮೇಲೆ ಗುಂಡು ಹಾರಿಸಿದ ಲೇಡಿ ಪಿಎಸ್‌ಐ ಅನ್ನಪೂರ್ಣ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಮಹಿಳಾ ಅಧಿಕಾರಿಯನ್ನು ಲೇಡಿ ಸಿಂಗಂ, ಸಿಂಹಿನಿ, ಭದ್ರಕಾಳಿ ಅಂತೆಲ್ಲ ಜನರು ಹೊಗಳುತ್ತಿದ್ದಾರೆ.
ಈ ಎಲ್ಲ ಹೊಗಳಿಕೆಯ ಮಧ್ಯೆ ಆರೋಪಿಯ ಮೇಲೆ ಎನ್‌ಕೌಂಟರ್ ಮಾಡಿ ಸಾಯುವುದು ಎಷ್ಟು ಸರಿ ಎನ್ನುವ ಚರ್ಚೆಗಳು ಶುರುವಾಗಿದೆ. ಮತ್ತೊಂದೆಡೆ ಈ ಎನ್‌ಕೌಂಟರ್ ಪ್ರಕರಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎಂಟ್ರಿಯಾಗ್ತವಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದರಿಂದ ಆ ಮಹಿಳಾ ಅಧಿಕಾರಿಗೆ ಟೆನ್ಷನ್ ಶುರುವಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸರು ಈ ಎನ್‌ಕೌಂಟರ್ ಆದ 24 ಗಂಟೆಗಳಲ್ಲಿಯೇ ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಇಲಾಖಾ ಮೇಲಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ, ರಾಜ್ಯ ಹೋಮ್ ಸೆಕ್ರೆಟರಿಗೆ ವರದಿ ಸಲ್ಲಿಕೆ ಮಾಡಲಾಗಿದೆ. ವರದಿ ಸಲ್ಲಿಕೆ ಬೆನ್ನಲ್ಲೇ, ಎನ್‌ಕೌಂಟರ್ ಪ್ರಕರಣದ ವಿಚಾರಣೆಗೆ ಹುಬ್ಬಳ್ಳಿಗೆ ಬರುತ್ತಾ ಮಾನವ ಹಕ್ಕುಗಳ ಆಯೋಗ? ಎನ್ನುವ ಪ್ರಶ್ನೆ ಮೂಡಿದೆ.
ಇದೀಗ ಎನ್‌ಕೌಂಟರ್‌ನಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿಗೆ ಹೊಸ ತಲೆನೋವು ಶುರುವಾಗಿದೆ. ಒಂದು ನಿರಾಳದ ಸಂಗತಿ ಏನೆಂದರೆ, ಅತ್ಯಾಚಾರಿ, ಹಂತಕ ರಿತೇಶಕುಮಾರ್ ಪರವಾಗಿ ಇಲ್ಲಿಯವರೆಗೂ ಯಾರು ದೂರು ಕೊಟ್ಟಿಲ್ಲ. ಮಾನವ ಹಕ್ಕುಗಳ ಆಯೋಗಕ್ಕೂ ಯಾರೂ ದೂರು ಸಲ್ಲಿಸಿಲ್ಲ. ಹಾಗಂತ ಪೂರ್ತಿ ನಿರಾಳವಾಗಿರಬಹುದೇ ಲೇಡಿ ಪಿಎಸ್‌ಐ ಅನ್ನಪೂರ್ಣ? ಎಂದು ಕೇಳಿದ್ರೆ. ಇಲ್ಲ, ಏಕೆಂದರೆ ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧಿಸಿದ ಯಾವುದೇ ದೂರುಗಳನ್ನು ಆಯೋಗ ಸ್ವಯಂ ಪ್ರೇರಿತವಾಗಿ ತೆಗೆದುಕೊಳ್ಳಬಹುದು. ಇಲ್ಲವೇ ದೂರು ಅರ್ಜಿಯನ್ನು ಸ್ವೀಕರಿಸಿದ ನಂತರ ತನಿಖೆ ಮಾಡಬಹುದು ಹಾಗಾಗಿ ಸಹಜವಾಗಿಯೇ ಇದೀಗ ಅವಳಿ ನಗರದ ಪೊಲೀಸರಿಗೆ ಟೆನ್ಶನ್ ಶುರುವಾಗಿದೆ.