Hubli News: ಹುಬ್ಬಳ್ಳಿ: ಮಾನವೀಯತೆ ಎಲ್ಲಡೆ ಪ್ರಶಂಸೆಗೆ ಒಳಗಾಗುತ್ತದೆ. ಯಾವುದೇ ವ್ಯಕ್ತಿ ಮಾನವೀಯತೆ ಕಾರ್ಯ ಮಾಡಿದರೂ ಆತ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಹುಬ್ಬಳ್ಳಿನಗರದಲ್ಲಿ ಆಟೋ ಚಾಲಕ ಮಾನವೀಯತೆ ಮೆರೆದಿದ್ದು, ಇವರ ಕಾರ್ಯಕ್ಕೆ ಜನರು ಪ್ರಶಂಸಿಸುತ್ತಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಹಣಮಂತ ಬಸಂತ ರಾವ್ ಕಾಟೇ ಎಂಬುವರು ಆಟೋ ಚಾಲನೆ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇಂದು ಅವರ ಆಟೋದಲ್ಲಿ ಮಹಿಳೆ ಹಳೆ ಹುಬ್ಬಳ್ಳಿ ಇಂದ ಚೆನ್ನಮ್ಮ ಸರ್ಕಲ್‌ಗೆ ಪ್ರಯಾಣಿಸಿದ್ದರು.
ಮಹಿಳೆ ಆಟೋದಿಂದ ಇಳಿಯುವಾಗ ಆಟೋದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ನಂತರ ಹಣಮಂತ ಬ್ಯಾಗ್ನ್ನು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ತಂದು ಮಹಿಳೆಗೆ ವಾಪಾಸ್ ಮಾಡಿ ಮಾನವೀಯತೆ ಮೆರೆದಿದ್ದಾರೆ. ಬ್ಯಾಗಿನಲ್ಲಿ ಲಕ್ಷಾಂತರ ಬೆಲೆ ಬಾಳುವ 40 ಗ್ರಾಂ ಚಿನ್ನಾಭರಣವಿತ್ತು.
ಆಟೋ ಚಾಲಕ ಹಣಮಂತನ ಕಾರ್ಯಕ್ಕೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಭಿನಂದನೆ ಸಲ್ಲಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಚಾಕು ಹಿಡಿದು ಓಡಾಟ – ಸ್ಥಳೀಯರಿಗೆ ಬೆದರಿಕೆ ಹಾಕುವ ದೃಶ್ಯ ಸೆರೆ
ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?
World Cup 2023ಯಲ್ಲಿ ಭಾರತಕ್ಕೆ ಸೋಲು: ಟಿವಿ ಮುಂದೆ ಕುಸಿದು ಬಿದ್ದು ಅಭಿಮಾನಿ ಸಾವು