Thursday, November 7, 2024

Latest Posts

ಲೋಕಸಭೆಗೆ ನಾನೂ ಆಕಾಂಕ್ಷಿ: ಬಸವರಾಜ ಗುರಿಕಾರ

- Advertisement -

Dharwad News: ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ನಾನೂ ಸ್ಪರ್ಧೆ ಆಕಾಂಕ್ಷಿಯಾಗಿದ್ದೇನೆ. ಈ ಕುರಿತು ವರಿಷ್ಠರಿಗೆ ಸಹ ಮನವಿ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರ ಪ್ರಜ್ಞಾವಂತ ಮತದಾರರ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ. ನಾಯ್ಕರ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದರು. ನಂತರದಲ್ಲಿ ಸುಮಾರು 29 ವರ್ಷ ಬಿಜೆಪಿ ವಶದಲ್ಲೇ ಇದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ವಶಕ್ಕೆ ಪಡೆಯುವು ಅವಶ್ಯವಾಗಿದೆ ಎಂದರು.

ಪಕ್ಷ ಅವಕಾಶ ನೀಡಿದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಬಯಸಿದ್ದೇನೆ. ರಾಜ್ಯದ ಹಲವಾರು ಸಂಘಟನೆಗಳಲ್ಲಿ ಸಕ್ರೀಯವಾಗಿ ಕೆಲಸ ಮಾಡಿದ್ದೇನೆ. 30 ಲಕ್ಷ ಶಿಕ್ಷಕರ ಸದಸ್ಯತ್ವ ಹೊಂದಿದ ರಾಷ್ಟ್ರೀಯ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಕಾರ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಣ ಹಾಗೂ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಕನ್ಯಾಕುಮಾರಿಯಿಂದ ನವದೆಹಲಿವರೆಗೆ 11 ಸಾವಿರ ಕಿ.ಮೀ. ವ್ಯಾಪ್ತಿಯ ಭಾರತ ಯಾತ್ರೆ ಮಾಡಿದ್ದೇನೆ. ಇದರ ಜತೆಗೆ ಧಾರವಾಡ ಕ್ಷೇತ್ರದ ಜನತೆ ಒಡನಾಟ ಹೊಂದಿರುವುದರಿಂದ ಈ ಬಾರಿ ಸ್ಪರ್ಧೆ ನಡೆಸಲು ಬಯಸಿದ್ದೇನೆ ಎಂದರು.

ಅನೇಕ ಮತದಾರರು ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. ಬಹುತೇಕ ಮತದಾರರ ಸಹ ಆಶೀರ್ವಾದ ಸಹ ನನಗೆ ಇದೆ ಎಂದು ಭಾವಿಸಿದ್ದೇನೆ. ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಕ್ಷೇತ್ರದ ವೀಕ್ಷಕರು ಇನ್ನು ಕೆಲ ದಿನಗಳಲ್ಲೇ ಧಾರವಾಡಕ್ಕೆ ಆಗಮಿಸಲಿದ್ದಾರೆ ಎಂದರು.

ಗಂಗಾಧರ ದೊಡವಾಡ, ನೂರಹ್ಮದ್ ನದಾಫ್, ಪ್ರಕಾಶ ಹಳ್ಯಾಳ, ಬಿ.ಎಚ್. ಪೂಜಾರ, ಎಸ್.ಕೆ. ರಾಮದುರ್ಗ, ಇತರರು ಇದ್ದರು.

ಡೂಪ್ಲಿಕೇಟ್‌ ಸಿಎಂ (DCM) ಬಹಳ ಆವೇಶದಲ್ಲಿದ್ದಾರೆ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಹಿಗ್ಗಾಮುಗ್ಗಾ ವಾಗ್ದಾಳಿ

ಸರಿಯಾದ ಸಮಯದಲ್ಲಿ ಆಯ್ಕೆ – ಹೆಚ್‌ಡಿಡಿ ಭೇಟಿಯಾದ ವಿಜಯೇಂದ್ರ

ಕಮಲ ಮನೆ ಬೂದಿ ಮುಚ್ಚಿದ ಕೆಂಡ – ಪ್ರತಿಪಕ್ಷದ ನಾಯಕ ಯಾರು?

- Advertisement -

Latest Posts

Don't Miss