‘ನಾನೇನು ಸನ್ಯಾಸಿ ಅಲ್ಲ. ನಮಗೂ ಆಸೆ ಇರುತ್ತೆ. ಕೊಡದೆ ಇದ್ರೆ ನಾವೇನು ಪಕ್ಷ ವಿರೋಧಿ ಆಗಲ್ಲ’

Political News: ಹುಬ್ಬಳ್ಳಿ: ಇಂದು ಪ್ರದೀಪ್ ಶೆಟ್ಟರ್, ತಮ್ಮ ಸಹೋದರರಾದ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಶುಭಕೋರಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಸಹ ಭೇಟಿಯಾದರು.

ಈ ವೇಳೆ ಮಾತನಾಡಿದ ಪ್ರದೀಪ್ ಶೆಟ್ಟರ್, ಸಿಎಂ ಜೊತೆ ರಾಜಕೀಯ ಮಾತುಕತೆ ಮಾಡಲು ಅವಕಾಶ ಸಿಕ್ಕಿಲ್ಲ. ವೀರಶೈವ ಲಿಂಗಾಯತರಿಗೆ ನಮ್ಮ ಪಕ್ಷದಲ್ಲಿ ಮಹತ್ವ ನೀಡಬೇಕು. ಈ ಹಿನ್ನೆಲೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ. ನಮ್ಮ ಪಕ್ಷ ಸಮುದಾಯಕ್ಕೆ ಪ್ರಾಮುಖ್ಯತೆ ಕೊಟ್ಟಿದೆ. ನಮಗೆ ಸಂತೋಷ ಇದೆ. ನಮ್ಮ ಸಮುದಾಯ ಬಲಾಡ್ಯ ಇದೆ. ಜೋಶಿ ಬೇರೆ ಕಡೆ ಹೋದರೆ, ಜಾತಿ ಆಧಾರ ಮೇಲೆ ನಾವು ಟಿಕೆಟ್ ಕೇಳಬಹುದು. ನಮ್ಮಲ್ಲಿ ಅತಿ ಹೆಚ್ಚು ಲಿಂಗಾಯಿತರಿರುವ ಕ್ಷೇತ್ರಗಳಿವೆ. ಹೈಕಮಾಂಡ್ ಏನ್ ಮಾಡುತ್ತೆ ಗೊತ್ತಿಲ್ಲ. 40 ವರ್ಷಗಳಿಂದ ನಾವು ಕೂಡ ಕೆಲಸ ಮಾಡಿದ್ದೇವೆ. ಅದು ಹೈಕಮಾಂಡ್ಗೆ ಬಿಟ್ಟಿದ್ದು. ಇನ್ನೂ ಸಮಯ ಇದೆ. ಕಾದು ನೋಡೋಣ ಎಂದು ಹೇಳುವ ಮೂಲಕ, ಶೆಟ್ಟರ್ ಲಿಂಗಾಯತ ಅಸ್ತ್ರ ಚಲಾಯಿಸಿದ್ದಾರೆ.

ಸೆಂಟ್ರಲ್ ಕ್ಷೇತ್ರದಲ್ಲಿ ಆದಂತೆ ಎಲ್ಲಿ ಬೇಕಾದರೂ, ಏನು ಬೇಕಾದರೂ ಆಗಬಹುದು. ನಾನೇನು ಸನ್ಯಾಸಿ ಅಲ್ಲ ನಮಗೂ ಆಸೆ ಇರುತ್ತೆ. ಕೊಡದೆ ಇದ್ರೆ ನಾವೇನು ಪಕ್ಷ ವಿರೋಧಿ ಆಗಲ್ಲ ಎಂದು ಹೇಳಿದ್ದಾರೆ.

ಸಂತ್ರಸ್ತ ಮಹಿಳೆಯ ಭೇಟಿಗೆ ಹೈಕೋರ್ಟ್ ನಿರ್ಭಂದ: ಆದರೂ ಭೇಟಿಯಾದ್ರಾ ಬಿಜೆಪಿಗರು..?

‘ಈ ರೀತಿಯ ಆಡಂಬರ ನನಗೆ ಇಷ್ಟ ಆಗುವುದಿಲ್ಲ. ನಾನು ಇಂತಹುದಕ್ಕೆ ಪ್ರಚೋದನೆ ಕೊಡುವುದೂ ಇಲ್ಲ’

ಸಿಂಗಾಪುರದಲ್ಲಿ 15 ದಿನದಲ್ಲಿ 56 ಸಾವಿರ ಕೋವಿಡ್ ಕೇಸ್ ಪತ್ತೆ

About The Author